ಬೆಂಗಳೂರು: SCSP/TSP ಅನುದಾನದ ಸಮಗ್ರ ಬಳಕೆಗೆ ಗ್ಯಾರಂಟಿ ಅನುಷ್ಠಾನ ಮಾದರಿಯ ಸಮಿತಿ ರಚನೆ ಮಾಡಬೇಕು ಎಂದು ಭೀಮ್ ಆರ್ಮಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿತು.
ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ನೇತೃತ್ವದಲ್ಲಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ, ಗ್ಯಾರಂಟಿ ಅನುಷ್ಠಾನಕ್ಕೆ ರಾಜ್ಯ ಜಿಲ್ಲೆ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ಸರಕಾರ ರಚಿಸಿದೆ. ಅದೇ ಮಾದರಿಯಲ್ಲಿSCTP/TSP ಅನುದಾನ ಬಳಕೆಗೆ ಸಮಿತಿ ರಚಿಸಬೇಕು ಎಂದು ಸರಕಾರವನ್ನು ಆಗ್ರಹಿಸಲಾಯಿತು.
SCTP/TSP ಅನುದಾನ ಬೇರೆ ಕಡೆಗೆ ಬಳಕೆಯಾಗದಂತೆ ಎಚ್ಚರವಹಿಸಬೇಕು. ಅನುದಾನ ಸಂಪೂರ್ಣ ಬಳಕೆಯಾಗಲು ಕ್ರಮವಹಿಸಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ, ಅನುಷ್ಠಾನ ಸಮಿತಿ ಅಥವಾ ಕಾವಲು ಸಮಿತಿ ರಚನೆಯಾಗಬೇಕು. ಆಗ ಮಾತ್ರ ಅನುದಾನದ ಸಮರ್ಪಕ ಬಳಕೆ ಸಾಧ್ಯ ಎಂದು ಅವರು ಒತ್ತಾಯಿಸಿದರು.
