ಸುದ್ದಿ

ಅಪಘಾತ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಕುಟುಂಬಕ್ಕೆ ತಲಾ ರೂ.1 ಕೋಟಿ ಪರಿಹಾರ ವಿತರಣೆ

Share It

ಬೆಂಗಳೂರು: ಅಪಘಾತ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು KSRTC ಸಿಬ್ಬಂದಿಯ ಕುಟುಂಬಕ್ಕೆ ತಲಾ ರೂ.1 ಕೋಟಿ ಪರಿಹಾರ ವಿತರಣೆಯ ಚೆಕ್ ಅನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ವಿತರಿಸಿದರು.

ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಯ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ, ರೂ. 3.10 ಕೋಟಿ ಪರಿಹಾರ ಹಾಗೂ ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ಪರಿಹಾರ ವಿತರಣೆ ಮಾಡಲಾಯಿತು.

ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ (Commercial Management Software) ಇ-ವಾಣಿಜ್ಯ ಬಿಡುಗಡೆ (Soft Launch)ಮಾಡಲಾಯಿತು. ಸಾರಿಗೆ ಸುರಕ್ಷಾ ವಿಮಾ ಯೋಜನೆಯ ಮೂಲಕ ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ.ಈವರೆಗೂ 42 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟಾರೆ ರೂ.42 ಕೋಟಿ ಪರಿಹಾರ ನೀಡಿದಂತಾಗುತ್ತದೆ.

ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿಯಲ್ಲಿ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರಿಗೆ ಆರ್ಥಿಕ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ರೂ.10 ಲಕ್ಷಗಳಿಗೆ ದಿನಾಂಕ: 1.11.2023 ರಿಂದ ಹೆಚ್ಚಿಸಲಾಗಿದೆ.

ಸದರಿ ಮೊತ್ತವನ್ನು ದಿನಾಂಕ: 1.09.2025 ರಿಂದ ಜಾರಿಗೆ ಬರುವಂತೆ ರೂ.10 ಲಕ್ಷದಿಂದ ರೂ.14 ಲಕ್ಷಗಳಿಗೆ ಹೆಚ್ಚಿಸಲಾಗಿದೆ. 31 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10 ಲಕ್ಷಗಳಂತೆ ಒಟ್ಟು ರೂ.3.10 ಕೋಟಿ ಹಾಗೂ ಇಬ್ಬರು  ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು. ಈವರೆಗೂ 181+2 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟು ರೂ. 18.38 ಕೋಟಿಗಳ ಪರಿಹಾರ ನೀಡಿದಂತಾಗುತ್ತದೆ.

ಸಾರಿಗೆ ಮತ್ತು ಮುಜರಾಯಿ ಸಚಿವರು ಮಾತನಾಡಿ, , ಅಪಘಾತದಿಂದ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ ಸಾಂತ್ವಾನ ಹೇಳಿ, ಸಿಬ್ಬಂದಿಯ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಪರಿಹಾರ ಧನವನ್ನು ಯಾರಿಗೂ ನೀಡದಂತೆ  ಕಿವಿ ಮಾತು ಹೇಳಿ, ಹಣವಿದ್ದರೆ ಎಲ್ಲರು ನೆಂಟರು, ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಾರಿಗೆ ಸುರಕ್ಷಾ ಯೋಜನೆಯು” ಯಶಸ್ವಿಯಾಗಲು ಎಸ್.ಬಿ.ಐ ಬ್ಯಾಂಕ್ನ ಸಹಕಾರವು ಪ್ರಮುಖವಾಗಿದ್ದು, ಅವರಿಗೂ ಸಹ ಧನ್ಯವಾದಗಳನ್ನು ತಿಳಿಸಿದರು.

ನಿಗಮದ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಲ್ ಸ್ಟಾಲ್, ಉಪಹಾರ ಗೃಹ ಮತ್ತು ಇತರೆ ವಾಣಿಜ್ಯ 1847 ವಾಣಿಜ್ಯ ಮಳಿಗೆಗಳಿರುತ್ತದೆ.  ಸದರಿ ವಾಣಿಜ್ಯ ಮಳಿಗೆಗಳು/ವಾಣಿಜ್ಯ ವ್ಯವಹಾರಗಳ ಕುರಿತಂತೆ ಪರವಾನಗಿದಾರರಿಂದ ಪ್ರತಿ ಮಾಹೆಯಾನ ವಸೂಲು ಮಾಡಬೇಕಾದ ಪರವಾನಗಿ ಶುಲ್ಕ, ಜಿ.ಎಸ್.ಟಿ ಮೊತ್ತ, ತಡಪಾವತಿ ದಂಡ, ಇತರೆ ಶುಲ್ಕಗಳ ಕುರಿತ ಲೆಕ್ಕಾಚಾರವನ್ನು ಹಾಗೂ ಇನ್ವಾಯ್ಸ್ ತಯಾರಿಕೆಯನ್ನು ಪ್ರಸ್ತುತ ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ.

ವಾಣಿಜ್ಯ ಮಳಿಗೆಗಳ ಕುರಿತ ನಿರ್ವಹಣೆಯನ್ನು  ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ ಹಾಗೂ ಲೆಕ್ಕಾಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ. ಏಕರೂಪತೆ‌ ಮತ್ತು ದಕ್ಷತೆ ಹೆಚ್ಚಿಸಲು ಈ‌ ತಂತ್ರಾಂಶವನ್ನು  ಜಾರಿಗೊಳಿಸಲಾಗಿದೆ.

ವಾಣಿಜ್ಯ ಮಳಿಗೆಳ ನಿರ್ವಹಣೆಯನ್ನು ಸರಳೀಕರಣಗೊಳಿಸುವ ಸಲುವಾಗಿ ನಿಗಮದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಿಗಮದ ವತಿಯಿಂದಲೇ  ಅಭಿವೃದ್ದಿಪಡಿಸಲಾಗಿರುತ್ತದೆ ಎಂದು ತಿಳಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ರವರು ಮಾತನಾಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸುವಂತೆ ತಿಳಿಸಿದರು. ಹಣವನ್ನು ಸದುಪಯೋಗಪಡಿಸ ಕೊಳ್ಳಿ ಯಾರನ್ನು ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಡಾ. ನಂದಿನಿದೇವಿ ಕೆ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಮತ್ತು ಇಬ್ರಾಹಿಂ ಮೈಗೂರ, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳಾದ ಸಿ.ವಿ. ರಘುರಾಮ್, ಡಿವಿಜನಲ್ ಜನರಲ್ ಮ್ಯಾನೇಜರ್, ವಿಜಯ್ ಕೆ.ಟಿ., ಸಹಾಯಕ ಜನರಲ್ ಮ್ಯಾನೇಜರ್ ಮತ್ತು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತಿರಿದ್ದರು.


Share It

You cannot copy content of this page