ರೇವಣ್ಣ, ಪ್ರಜ್ವಲ್ ಪ್ರಕರಣದಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸದಂತೆ ಸೂಚನೆ

75
Share It

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೆöÊವ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೆಸರು ಪದೇಪದೆ ಬಳಸದಂತೆ ನ್ಯಾಯಾಲಯ ಸೂಚನೆ ನೀಡಿದೆ.

ಪೆನ್ಡೆçöÊವ್ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ, ಬಹುತೇಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರನ್ನು ಅನೇಕರು ಬಳಕೆ ಮಾಡಿದ್ದರು. ಕೆಲವರು ಪ್ರಜ್ವಲ್ ಪ್ರಕರಣಕ್ಕೆ ಇಡೀ ಕುಟುಂಬವೇ ಕಾರಣ ಎಂಬAತೆ ಬರೆದಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಘಟನೆತೆ ಧಕ್ಕೆ ತರುವಂತೆಯೂ ಕೆಲವರು ಪದಬಳಕೆ ಮಾಡಿದ್ದರು.

ಈ ಎಲ್ಲ ಘಟನೆಗಳ ಸಂಬAಧ ನ್ಯಾಯಾಲಯ, ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ, ಮಾಜಿ ಮಂತ್ರಿ ರೇವಣ್ಣ ಹೊರತುಪಡಿಸಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನಾಗಲೀ, ಬಳಕೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಇದು ಮಾಧ್ಯಮಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರಿಗೆ ಸೇರಿ ಪ್ರಕರಣದ ಸಂಬAಧ ಚರ್ಚಿಸುವ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

ಈ ಹಿಂದೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಇದೇ ರೀತಿ, ಆಕೆಯ ಹೆಸರಿಗೆ ಕುಂದಾಪುರ ಎಂಬ ಪದ ಬಳಕೆ ಮಾಡಬಾರದು ಎಂದು ಕೆಲವರು ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಪ್ರಕರಣದ ಸಂಬAಧ ಕುಂದಾಪುರ ಬಳಸದಂತೆ ಸೂಚನೆ ನೀಡಿತ್ತು.

ಇದೀಗ ಪ್ರಜ್ವಲ್ ರೇವಣ್ಣ, ರೇವಣ್ಣ ಮಾಡಿದ ತಪ್ಪಿಗೆ ಮಾಜಿ ಪ್ರಧಾನಿ, ದೇವೇಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರನ್ನು ಬಳಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


Share It

You may have missed

You cannot copy content of this page