ಒಂಟಿ ಮಹಿಳೆಯ ಟಾರ್ಗೆಟ್: ಮೂರು ಕೆ.ಜಿ. ಚಿನ್ನಾಭರಣ ಕಳವು
ಚಿಕ್ಕಬಳ್ಳಾಪುರ: ಒಂಟಿ ಮಹಿಳೆ ವಾಸವಿದ್ದ ಮನೆಯನ್ನು ಟಾರ್ಗೆಟ್ ಮಾಡಿ, ಹಲ್ಲೆ ನಡೆಸಿ ಮೂರು ಕೆ.ಜಿ. ಚಿನ್ನ ಕಳವು ಮಾಡಿರುವ ಘಟನೆ ಶಿಡ್ಲಘಟ್ಟ ನಗರದ ಇಲಾಹಿ ನಗರದಲ್ಲಿ ನಡೆದಿದೆ.
ಮನೆಗೆ ನುಗ್ಗಿದ ಖದೀಮರು ಸಿಸಿಟಿವಿ ಡಿವಿಆರ್ ಅನ್ನು ಕೂಡ ನಿಷ್ಕ್ರಿಯಗೊಳಿಸಿ, ಅನಂತರ ಮುಬಾರಕ್ ಎಂಬ ಮಹಿಳೆಗೆ ಚಾಕು ತೋರಿಸಿ, ಮನೆಯಲ್ಲಿದ್ದ ಮೂರು ಕೆ.ಜಿ. ಚಿನ್ನ ಕದ್ದು ಪರಾರಿಯಾಗಿದ್ದಾರೆ. ಮಹಿಳೆಯ ಪರಿಚಯಸ್ಥರೇ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕಡ ಪೊಲೀಸರು ಆಗಮಿಸಿ, ಮಾಹಿತಿ ಪಡೆದುಕೊಂಡಿದ್ದು, ಮಹಿಳೆಯನ್ನು ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.


