ತುಮಕೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಕಾಳಗ ಇನ್ನೂ ನಡೆಯುತ್ತಿದ್ದರೂ, ಈ ನಡುವೆಯೇ ಪರಮೇಶ್ವರ್ ಸಿಎಂ ಆಗಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿದೆ.
ಕುರ್ಚಿ ಕಿತ್ತಾಟಕ್ಕೆ ತುಪ್ಪ ಸುರಿಯಂತಹ ಘಟನೆಗಳು ಇತ್ತೀಚೆಗೆ ನಡೆಯುತ್ತಿದ್ದು, ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕೇಂದ್ರ ಸಚಿವ ವಿ.ಸೋಮಣ್ಣ ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬುದು ನಮ್ಮ ಆಸೆ ಮಾತ್ರವಲ್ಲ, ಇಡೀ ತುಮಕೂರು ಜಿಲ್ಲೆಯ ಹಾಗೂ ರಾಜ್ಯದ ದಲಿತ ಸಮುದಾಯ ಹಾಗೂ ಪ್ರಜ್ಞಾವಂತರ ಆಶಯ ಎಂದರು. ಇದು ಪರಮೇಶ್ವರ್ ಸಿಎಂ ಆಗಬೇಕು ಎಂಬ ಕೂಗಿಗೆ ತುಪ್ಪ ಸುರಿದಿದೆ.
ತುಮಕೂರಿನಲ್ಲಿ ಅಭಿಮಾನಿಗಳು ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು. ಹಿಂದೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪರಮೇಶ್ವರ್ ಶ್ರಮಿಸಿದ್ದಾರೆ. ಈಗಲೂ ಅವರು ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿ ನಿಂತಿದೆ. ಆದರೆ, ಹೈಕಮಾಂಡ್ ಪರಮೇಶ್ವರ್ ಅವರ ಬಗ್ಗೆ ಯಾವುದೇ ಮಾತನಾಡದೇ, ಡಿಕೆಶಿಗೆ ಸಿಎಂ ಪಟ್ಟಲು ನೀಡಲು ಸಿದ್ಧತೆ ನಡೆಸಿದೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

