ಮಡಿಕೇರಿಯಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಟೂರಿಸ್ಟ್ ಬಸ್ : ತಪ್ಪಿದ ಭಾರಿ ದುರಂತ
ಮಡಿಕೇರಿ: ಟೂರಿಸ್ಟ್ ಬಸ್ ವೊಂದು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದ್ದು, ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಮಾಕಿಟ್ಟ ಬಳಿಯ ಮಗಡಿಪಾರೆ ಆಂಜನೇಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಕೇರಳ ನೋಂದಣಿ ಸಂಖ್ಯೆಯನ್ಮು ಹೊಂದಿರುವ ಖಾಸಗಿ ಬಸ್ ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ, ವಾಪಸ್ ತೆರಳುವಾಗ ಘಟನೆ ನಡೆದಿದೆ. ಬಸ್ ನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರವೇ ಇದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ತಕ್ಷಣವೇ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಕೈಗೊಂಡಿದ್ದಾರೆ.


