ಸಿಡ್ನಿಯ ಬೋಂಡಿ ಬೀಚ್ನಲ್ಲಿ ನರಮೇಧ : 16 ನಾಗರಿಕರ ಸಾವು
ಸಿಡ್ನಿ (ಆಸ್ಟ್ರೇಲಿಯಾ): ಸಿಡ್ನಿಯ ಜನಪ್ರಿಯ ಬೋಂಡಿ ಬೀಚ್ನಲ್ಲಿ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ಬಂದೂಕುಧಾರಿಗಳಿಬ್ಬರು ದಾಳಿ ನಡೆಸಿದ್ದು, ದಾಳಿಯಲ್ಲಿ ಒಂದು ಮಗು ಸೇರಿ ೧೬ ಜನರು ಸಾವನ್ನಪ್ಪಿದ್ದಾರೆ.
ತಂದೆ ಮತ್ತು ಮಗ ನಡೆಸಿದ ದಾಳಿ ಇದಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಪ್ರಧಾನಿ ಆಂಥೋನಿ ಅಲ್ಬನೀಸ್, ದೇಶದ ಹೃದಯಭಾಗದಲ್ಲಿ ನಡೆದ ಈ ದಾಳಿ ಯೆಹೂದ್ಯ ವಿರೋಧಿ ಭಯೋತ್ಪಾದನಾ ಕೃತ್ಯ ಎಂದು ಕರೆದಿದ್ದಾರೆ.
ಆಸ್ಟ್ರೇಲಿಯಾದ ಮಾಧ್ಯಮಗಳ ವರದಿ ಪ್ರಕಾರ, ಸಜೀದ್ ಅಕ್ರಮ್ ಮತ್ತು ಆತನ ಮಗ ನವೀದ್ ಅಕ್ರಮ್ ಎಂದು ಹೆಸರಿಸಿದ್ದು, ಅವರು ಪಾಕಿಸ್ತಾನ್ ಮೂಲದವರು ಎಂದು ಹೇಳಲಾಗಿದೆ. ದಾಳಿಗೆ ಪ್ರತಿಯಾಗಿ ಪೊಲೀಸರು ಕೂಡ ದಾಳಿ ನಡೆಸಿದ್ದು, ೫೦ ವರ್ಷದ ದಾಳಿಕೋರ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ದಾಳಿಕೋರ ಆತನ ೨೪ ವರ್ಷದ ಮಗನಾಗಿದ್ದು, ಆತ ಗುಂಡಿನ ದಾಳಿಯಿಂದಾಗಿ ಗಾಯಗೊಂಡಿದ್ದಾನೆ.
ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ತಿಳಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ೧೦ ವರ್ಷದ ಮಗು ಸೇರಿ ೧೬ ಜನ ಸಾವನ್ನಪ್ಪಿದ್ದು, ಗಾಯಗೊಂಡ ೪೨ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ.


