ಸುದೀಪ್ ಆಪ್ತ ಮಂಜುಗೆ ಇರುವ ಸೌಲಭ್ಯ ಗಿಲ್ಲಿಗ್ಯಾಕಿಲ್ಲ?: ಸುದೀಪ್ ವಿರುದ್ಧ ನೆಟ್ಟಿಗರ ಆಕ್ರೋಶ

Share It

ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಆಪ್ತರಿಗೆ ಇರುವ ವಿಶೇಷ ಸೌಲಭ್ಯ ಉಳಿದವರಿಗೆ ಸಿಗುತ್ತಿಲ್ಲವೇ? ಹೀಗೊಂದು ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಕಳೆದ ಸೀಸನ್ ವೇಳೆ ಸುದೀಪ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಉಗ್ರಂ ಮಂಜು ಮನೆಯಲ್ಲಿದ್ದಾಗಲೇ, ಸುದೀಪ್ ಜತೆ ಮಂಜು ನಟನೆ ಮಾಡಿದ್ದ ಸಿನಿಮಾ ಮ್ಯಾಕ್ಸ್ ಬಿಡುಗಡೆಯಾಗಿತ್ತು. ಅದರಲ್ಲಿ ಮಂಜು ಅಭಿನಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದು, ಅದನ್ನು ಸುದೀಪ್ ಬಿಗ್‌ಬಾಸ್ ವಾರಾಂತ್ಯದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದ್ದರು.

ಉಗ್ರಂ ಮಂಜು ಅಭಿನಯದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದು, ಈ ಜಗ್ಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೊಗಳಿ ಅಟ್ಟಕ್ಕೇರಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿನಟ ಡೆವಿಲ್ ಸಿನಿಮಾದಲ್ಲಿ ಅಭಿನಯಿಸಿದ್ದು, ಪ್ರೇಕ್ಷಕರಿಂದ ಭಾರಿ ಪ್ರಸಂಸೆ ವ್ಯಕ್ತವಾಗಿದೆ.

ಆದರೆ, ವಾರಾಂತ್ಯದ ಕಾರ್ಯಕ್ರಮದಲ್ಲಿ ಸುದೀಪ್, ಗಿಲ್ಲಿ ನಟನ ಅಭಿನಯದ ಬಗ್ಗೆಯಾಗಲೀ, ಡೆವಿಲ್ ಸಿನಿಮಾದ ಬಗ್ಗೆಯಾಗಲೀ ಒಂದೂ ಮಾತನ್ನಾಡಲೇ ಇಲ್ಲ. ದರ್ಶನ್ ಮತ್ತು ಸುದೀಪ್ ನಡುವೆ ಸಮಸ್ಯೆಯಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅದಕ್ಕೆ ಒಬ್ಬ ನಟನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸದಷ್ಟು ಚಿಕ್ಕವರಾದರಾ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ಸುದೀಪ್ ಇಂತಹದ್ದೊAದು ಮನಸ್ಥಿತಿಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಈ ಸಲದ ಬಿಗ್‌ಬಾಸ್‌ನಲ್ಲಿ ಗಿಲ್ಲಿನಟ ಅತ್ಯುತ್ತಮವಾಗಿ ಆಡುತ್ತಿದ್ದು, ಪ್ರೇಕ್ಷಕರ ಪೆವರೇಟ್ ಆಗಿದ್ದಾರೆ. ಇದೇ ಕಾರಣಕ್ಕೆ ಡೆವಿಲ್ ನಲ್ಲಿ ಅವರ ನಟನೆಯ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. `ಈ ಸಂದರ್ಭದಲ್ಲಿ ಸುದೀಪ್ ನಡೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರuವಾಗಿದೆ.


Share It

You May Have Missed

You cannot copy content of this page