ಟ್ರಕ್ ಬೆಂಕಿಗಾಹುತಿ: ಸುಟ್ಟು ಕರಕಲಾದ 40 ಬೈಕ್ ಗಳು
ಬಳ್ಳಾರಿ: ಚೆನ್ನೈ ನಿಂದ ಬಳ್ಳಾರಿಗೆ ಬರುತ್ತಿದ್ದ ಟ್ರಕ್ ಬೆಂಕಿಗೆ ಆಹುತಿಯಾಗಿದ್ದು, ಟ್ರಕ್ ನಲ್ಲಿ ಸಾಗಿಸುತ್ತಿದ್ದ 40 ಬೈಕ್ ಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಸೋಮವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಸುಮಾರು 60 ಲಕ್ಷ ರು. ಮೌಲ್ಯದ ಬೈಕ್ ಗಳು ಸುಟ್ಟು ಹೋಗಿವೆ. ಬಳ್ಳಾರಿ ಮತ್ತು ವಿಜಯಪುರದ ಶೋರೂಂಗಳಿಗೆ ಸರಬರಾಜು ಮಾಡಲು ಚೆನೈ ನಿಂದ ಯಮಹಾ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಬೈಪಾಸ್ ನಲ್ಲಿ ರಸ್ತೆ ಬದಿಗೆ ಟ್ರಕ್ ನಿಲ್ಲಿಸಿದ್ದ ಚಾಲಕ ನಿದ್ರೆಗೆ ಜಾರಿದ್ದ ಎನ್ನಲಾಗಿದೆ. ಈ ವೇಳೆ ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರು ಅಗ್ನಿಶಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.


