ಇಂದು ದರ್ಶನ್ ಪ್ರಕರಣದ ಸಾಕ್ಷಿಗಳ ವಿಚಾರಣೆ
ಬೆಂಗಳೂರು: ನಟ ದರ್ಶನ್ ಅವರ ವಿರುದ್ಧದ ಕೊಲೆ ಪ್ರಕರಣದಲ್ಲಿ ಇಂದು ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ನಟ ದರ್ಶನ್ ವಿರುದ್ಧದ ಆರೋಪಗಳನ್ನು ಸಾಭೀತುಪಡಿಸುವ ಸಂಬAಧ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗುತ್ತದೆ. ಪ್ರಸ್ತುತ ಜಾಮೀನು ರದ್ದುಗೊಂಡಿದ್ದು, ದರ್ಶನ್ ಜೈಲಿನಲ್ಲಿಯೇ ಕಳೆಯುತ್ತಿದ್ದಾರೆ.
ಪೊಲೀಸರು ಸಂಗ್ರಹಿಸಿರುವ ಸುಮಾರು ೩೦ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ. ಸಿನಿಮಾ ಬಿಡುಗಡೆಯಾಗಿದ್ದರೂ, ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.


