ಬೀದರ್ ನ ಅರಣ್ಯಕ್ಕೆ ಬೆಂಕಿ: 50 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ
ಬೀದರ್: ಅರಣ್ಯ ಸಚಿವರ ಉಸ್ತುವಾರಿ ಜಿಲ್ಲೆಯಾದ ಬೀದರ್‌ನಲ್ಲಿಯೇ ಅರಣ್ಯ ಪ್ರದೇಶಕ್ಕೆ ಬೆಂಕಿಬಿದ್ದಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಆಸಕ್ತಿವಹಿಸಿದಂತಹ ಘಟನೆ ನಡೆದಿದೆ.
ಜಿಲ್ಲೆಯ ದೊಮಸಾಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೆ ಬಂದಿದೆಯಾದರೂ, ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿಲ್ಲ ಎನ್ನಲಾಗಿದೆ.
ಜಿಂಕೆ, ಕೃಷ್ಣಮೃಗಗಳು ಹೆಚ್ಚಾಗಿ ವಾಸಿಸುವ ಸುಮಾರು ೫೦ ಎಕರೆ ಅರಣ್ಯ ಪ್ರದೇಶ ಈಗಾಗಲೇ ಬೆಂಕಿಗಾಹುತಿಯಾಗಿದೆ. ಇನ್ನೂ ಕೂಡ ಬೆಂಕಿಯ ಕೆನ್ನಾಲಗೆ ಹೆಚ್ಚಾಗುತ್ತಿದ್ದು, ನೂರಾರು ಮರಗಳು ಮತ್ತು ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿಯಾಗಿದೆ.


