ಜೈಲಿನಲ್ಲಿ ದರ್ಶನ್ ಬೇಟಿಗೆ ಪಟ್ಟು ಹಿಡಿದ ಪವಿತ್ರಾಗೌಡ ?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಭೇಟಿ ಮಾಡಲೇಬೇಕು ಎಂದು ಅವರ ಗೆಳತಿ ಹಾಗೂ ಪ್ರಕರಣದ ಎ-೧ ಆರೋಪಿ ಪವಿತ್ರಾಗೌಡ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಡಿವಿಲ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪ್ರಕರಣದಲ್ಲಿ ಜಾಮೀನು ರದ್ದುಗೊಂಡ ಕಾರಣ ಈ ಇಬ್ಬರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ನಡುವೆ ಪರಸ್ಪರ ಭೇಟಿಯಾಗಿ ಬಹಳ ದಿನಗಳಾಗಿದ್ದು, ಅವರ ಭೇಟಿಗೆ ಅವಕಾಶ ಕೊಡಿ ಎಂದು ಪವಿತ್ರಾಗೌಡ ಕೇಳಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಜೈಲಿಗೆ ಹೋದ ನಂತರ ಈ ಇಬ್ಬರು ಪರಸ್ಪರ ಭೇಟಿಯಾಗಿಲ್ಲ. ಜಾಮೀನು ಸಿಕ್ಕಿದಾಗಲೂ ಪತ್ನಿ ವಿಜಯಲಕ್ಷಿö್ಮ, ದರ್ಶನ್ ಬೆನ್ನಿಗೆ ನಿಂತು ಸಿನಿಮಾ ಕೆಲಸಗಳನ್ನೆಲ್ಲ ನೋಡಿಕೊಳ್ಳುತ್ತಿದ್ದು, ಪವಿತ್ರಾ ಭೇಟಿಗೆ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ, ಈಗ ಭೇಟಿಗೆ ಅವಕಾಶ ಕೊಡುವಂತೆ ಪವಿತ್ರಾ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.


