19 ರ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಚೆಲುವ: ಯುವತಿ ತಂದೆ ಹಾಗೂ ಮಾವಂದಿರಿಂದ ಕೊಲೆ
ಮಾಗಡಿ: 19 ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ ಯುವಕನೊಬ್ಬ ಧಾರುಣವಾಗಿ ಕೊಲೆಯಾಗಿರುವ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಚೆಲುವ ಎಂಬಾತನೇ ಕೊಲೆಯಾದವನು. ಈತನನ್ನು ನೆನ್ನೆ ಗ್ರಾಮದಿಂದ ಕಿಡ್ನಾಪ್ ಮಾಡಲಾಗಿತ್ತು. ಕಾರಿನಲ್ಲಿ ಆತನನ್ನು ಅಪಹರಣ ಮಾಡಿದ್ದ, ಕೊಲೆಗಾರರು ಅನಂತರ ಕೊಚ್ಚಿ ಕೊಲೆ ಮಾಡಿ ಮಾಗಡಿ ಸಮೀಪ ಎಸೆದು ಪರಾರಿಯಾಗಿದ್ದಾರೆ.
Updating…


