ಐದು ವರ್ಷ ನಾನೇ ಸಿಎಂ ಎಂದ ಸಿದ್ದು: ಡಿಸಿಎಂ ಡಿಕೆಶಿ ಟೆಂಪಲ್ ರನ್
ಬೆಂಗಳೂರು: ಸಿಎಂ ಸ್ಥಾನದ ಗೊಂದಲಕ್ಕೆ ತೆರೆಎಳೆದಿರುವ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿರುವ ಬೆನ್ನಲ್ಲೆ ಡಿಕೆ ಶಿವಕುಮಾರ್ ಶಕ್ತಿದೇವತೆಯ ಮೊರೆ ಹೋಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ್ ಅಂಕೋಲಾ ತಾಲೂಕಿನ ಅಂದ್ಲೇ ಜಗದೀಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ತಮ್ಮ ಆಪ್ತ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಡಿಕೆಶಿ ಪೂಜೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.



