ಡಿಸಿಎಂ ಡಿಕೆಶಿ ನಿವಾಸಕ್ಕೆ ಉತ್ತರ ಭಾರತದ ನಾಗಸಾಧುಗಳ: ಅವರು ಮಾಡಿದ ಆಶೀರ್ವಾದವೇನು
ಬೆಂಗಳೂರು: ಉತ್ತರ ಭಾರತದ ನಾಗಸಾಧುಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಆಶೀರ್ವದಿಸಿದರು.
ಸಿಎಂ ಸ್ಥಾನ ಬದಲಾವಣೆ ಚರ್ಚೆಯ ಹೊತ್ತಿನಲ್ಲಿ ನಾಗಸಾಧುಗಳ ಆಗಮನವಾಗಿರುವುದು ಶುಭಸೂಚಕ ಎಂದು ಡಿಕೆಶಿ ಬೆಂಬಲಿಗರು ಹೇಳಿಕೊಂಡಿದ್ದಾರೆ. ಈ ನಡುವೆ ಅವರು ಏನೆಂದು ಆಶೀರ್ವಾದ ಮಾಡಿದರು ಎಂಬುದು ಕುತೂಹಲ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಎಂದು ಹೇಳಿದ ಬೆನ್ನಲ್ಲೇ ಡಿಸಿಎಂ ದೇವಸ್ಥಾನಗಳ ಪರ್ಯಟನೆ ಆರಂಭಿಸಿದ್ದರು. ನೆನ್ನೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಮತ್ತು ಶಕ್ತಿ ದೇವತೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.
ಇಂದು ಬೆಳ್ಳಂಬೆಳಗ್ಗೆ ನಾಗಸಾಧುಗಳು ಅನಿರೀಕ್ಷಿತವಾಗಿ ಆಗಮಿಸಿ ಡಿಕೆಶಿಗೆ ಆಶೀರ್ವಾದ ಮಾಡಿದ್ದಾರೆ. ಅವರು ಏನೋ ನಿಗೂಢ ಸಂದೇಶವನ್ನು ಹೇಳಿದ್ದಾರೆಂದು ಹೇಳಲಾಗುತ್ತಿದೆಯಾದರೂ, ಅದನ್ನು ಬಹಿರಂಗಪಡಿಸಲು ಡಿಕೆಶಿ ನಿರಾಕರಿಸಿದ್ದಾರೆ.


