ಮಧುಚಂದ್ರ ಮರ್ಡರ್ ಕೇಸ್ : ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ಶಿಲ್ಲಾಂಗ್: ಮಧುಚಂದ್ರಕ್ಕೆ ಕರೆದೊಯ್ದಿದ್ದ ಪತಿಯನ್ನು ಕೊಂದು ಕತೆಕಟ್ಟಿದ್ದ ಮಹಿಳೆಗೆ ಮೇಘಾಲಯದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಪ್ರಮುಖ ಆರೋಪಿ ಸೋನಮ್ ರಘುವಂಶಿ, ತನ್ನ ಪತಿಯ ಜತೆಗೆ ಮೇಘಾಲಯಕ್ಕೆ ಮಧುಚಂದ್ರಕ್ಕೆ ಹೋಗಿದ್ದು, ಅಲ್ಲಿ ತನ್ನ ಗೆಳೆಯ ಹಾಗೂ ಇತರೆ ಆರೋಪಿಗಳ ಜತೆ ಸೇರಿ ಗಂಡನನ್ನು ಕೊಂದು ಕಾಡಿನಲ್ಲಿ ಬಿಸಾಡಿದ್ದಳು. ಇದು ದೇಶಾದ್ಯಂತ ಸಂಚಲನ ಮೂಡಿಸಿದ್ದ ಪ್ರಕರಣವಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು 700 ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಆಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.


