ಬಿಸಿನೀರಿನ ಪಾತ್ರೆಗೆ ಬಿದ್ದ ಎರಡು ವರ್ಷದ ಮಗು ಸಾವು
ಹುಣಸೂರು: ಸ್ನಾನಕ್ಕೆಂದು ಕಾಯಿಸಿ ಇಟ್ಟಿದ್ದ ಬಿಸಿನೀರಿನ ಪಾತ್ರೆಗೆ ಬಿದ್ದ ಎರಡು ವರ್ಷದ ಮಗವೊಂದು ಸಆವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಯಗಿರಿ ಹಾಡಿಯಲ್ಲಿ ವಾಸವಿದ್ದ ರಮ್ಯಾ ಮತ್ತು ಬಸಪ್ಪ ದಂಪತಿಯ ಎರಡು ವರ್ಷದ ಮಗು ವೇದಾ ಸಾವನ್ನಪ್ಪಿದೆ. ರಮ್ಯಾ ಮಗುವಿಗೆ ಸ್ನಾ ಮಾಡಿಸಲು ಬಿಸಿನೀರು ಕಾಯಿಸಿದ್ದು, ತಣ್ಣೀರು ತರಲು ಒಳಗೆ ಹೋದ ಸಂದರ್ಭದಲ್ಲಿ ಮಗು ಬಿಸಿನೀರಿನ ಪಾತ್ರೆಗೆ ಬಿದ್ದಿದೆ.
ತಕ್ಷಣವೇ ನೋಡಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿಯತ್ತಾದರೂ, ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೇದಾ ಸಾವನ್ನಪ್ಪಿದ್ದು, ಪೋಷಕರ ಆಕ್ರಂಧನ ಮುಗಿಲುಮುಟ್ಟಿದೆ.


