ಮತ್ತೇ ಕೆ.ಎನ್. ರಾಜಣ್ಣ ಭೇಟಿ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಸಿಎಂ ಸ್ಥಾನದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಹಿಂದ ನಾಯಕ ರಾಜಣ್ಣರನ್ನು ಭೇಟಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಭೇಟಿ ಮಾಡಿರುವ ಡಿಸಿಎಂ, ಅವರ ಜತೆಗೆ ಖಾಸಗಿಯಾಗಿ ಮಾತುಕತೆ ನಡೆಸಿದ್ದಾರೆ. ಅಹಿಂದ ನಾಯಕರೆಲ್ಲರೂ ಸೇರಿ ಸಿಎಂ ಬೆನ್ನಿಗೆ ನಿಂತಿರುವ ಬೆನ್ನಲ್ಲೇ, ಸಂಪುಟದಿAದ ವಜಾಗೊಂಡಿರುವ ರಾಜಣ್ಣ ಅವರನ್ನು ಮನವೊಲಿಸಿಕೊಳ್ಳುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ.


