ಅಧಿವೇಶನ ಚೆನ್ನಾಗಿತ್ತು; ಒಳ್ಳೆಯ ಊಟ ಮಾಡಿದ್ವಿ:ಮಾಜಿ ಸಚಿವ ಎಚ್.ಡಿ. ರೇವಣ್ಣ ಲೇವಡಿ
ಹಾಸನ: ಅಧಿವೇಶನವೇನೋ ಚೆನ್ನಾಗಿತ್ತು, ಮಧ್ಯಾಹ್ನ ಒಳ್ಳೆಯ ಊಟ ಮಾಡಿದ್ವಿ ಅಷ್ಟೇ, ಅದನ್ನು ಬಿಟ್ಟರೆ ಬೇರೇನೂ ಪ್ರಯೋಜನವಾಗಲಿಲ್ಲ ಎಂದು ಬೆಂಳಗಾವಿ ಅಧಿವೇಶನದ ಬಗ್ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಲೇವಡಿ ಮಾಡಿದ್ದಾರೆ.
ಅಧಿವೇಶನದಲ್ಲಿ ಯಾವುದೇ ಉಪಯೋಗಕ್ಕೆ ಬರುವ ಚರ್ಚೆಗಳಾಗಲಿಲ್ಲ, ದ್ವೇಷ ಭಾಷಣದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಅದೇನು ವಿಧೇಯಕ ಅನ್ನೋದೆ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಅಧಿವೇಶನದಲ್ಲಿ ಬಹುವಾಗಿ ಚರ್ಚೆಯಾದ ದ್ವೇಷ ಭಾಷಣ ವಿಧೇಯಕದ ಕುರಿತು ತಿಳಿಸಿದರು.


