ಕಾಲ್ತುಳಿತ ತಡೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ-ಹವನ ನಡೆಸಿದ ವೆಂಕಟೇಶ ಪ್ರಸಾದ್ !

Share It

ಬೆಂಗಳೂರು: 2025 ಜೂನ್ ತಿಂಗಳಲ್ಲಿ ನಡೆದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತದಂಥ ಯಾವುದೇ ಪ್ರಕರಣಗಳು ಮುಂದೆ ಕ್ರೀಡಾಂಗಣದಲ್ಲಿ ಮರುಕಳಿಸದಿರಲಿ ಎಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ- ಹವನ ನೆರವೇರಿಸಲಾಗಿದೆ.

ಜೂನ್ ನಲ್ಲಿ ಐಪಿಎಲ್ ಗೆದ್ದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳನ್ನು ನಡೆಸುವುದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಇತ್ತೀಚೆಗೆ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷರಾಗಿದ್ದು, ಅವರ ಪ್ರಯತ್ನದಿಂದಾಗಿ ಚಿನ್ವಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ಗೃಹ ಇಲಾಖೆಯಿಂದ ನಿಗದಿಪಡಿಸಲಾಗಿರುವ ಷರತ್ತುಗಳನ್ನು ಪಾಲಿಸುವಂತೆ ಕೆಎಸ್‌ಸಿಎಗೆ ಸರ್ಕಾರ ಸೂಚಿಸಿದೆ. ನ್ಯಾ. ಮೈಕಲ್ ಡಿ. ಕುನ್ಹಾ ಅವರ ಸಮಿತಿ ಚಿನ್ನಸ್ವಾಮಿಯಲ್ಲಿ ಮತ್ತೆ ಇಂಥ ಅವಗಢ ಸಂಭವಿಸದAತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ 17 ಷರತ್ತು ವಿಧಿಸಿದೆ. ಆ ಸಮಿತಿ ಸಭೆ ನಂತರ ಯಾವ ಪಂದ್ಯಗಳಿಗೆ ಎಷ್ಟೆಷ್ಟು ಅನುಮತಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುತ್ತದೆ.

ಈ ಎಲ್ಲ ಬೆಳವಣಿಗೆಯ ನಡುವೆ ನೂತನ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ-ಹವನ ನಡೆಸುವ ಮೂಲಕ ಮುಂದೆ ಇಂತಹ ಅವಾಂತರಗಳು ನಡೆಯದಂತೆ ದಿಗ್ಭಂದನ ಮಾಡಿಸಿದರು ಎಂದು ವರದಿಯಾಗಿದೆ.


Share It

You May Have Missed

You cannot copy content of this page