ಬೆಂಗಳೂರು: ಆಟೋದಲ್ಲಿ ವೀಲ್ಹಿಂಗ್ ಹೊಡೆದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಪುಂಡನೊಬ್ಬನನ್ನು ಬೆಂಗಳೂರು ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ಶಕ್ತಿನಗರ ನಿವಾಸಿ ಉದಯ್ ವಿಕ್ರಂ ಎಂಬಾತ ತನ್ನ ಆಟೋದಲ್ಲಿ ವೀಲ್ಹಿಂಗ್ ಮಾಡುವ ಮೂಲಕ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ. ಶೋಕಿಗಾಗಿ, ಬೇರೆ ಬೇರೆ ಸ್ಟೆöÊಲ್ನಲ್ಲಿ ವಿಡೀಯೋ ಮಾಡುತ್ತಿದ್ದ, ಆತ ಅದರಿಂದ ಫೇಮಸ್ ಆಗುವ ಹಂಬಲದಲ್ಲಿದ್ದ.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ, ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

