ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾಗೊಂಡಿದ್ದು, ಬಂಧನದ ಸಾಧ್ಯತೆ ಹೆಚ್ಚಾಗಿದೆ.
ಕೊಲೆ ಪ್ರಕರಣದಲ್ಲಿ ಸಿಐಡಿ ಬೈರತಿ ಬಸವರಾಜ್ ಬಂಧನಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಬೈರತಿ ಬಸವರಾಜ್ ಬಂಧನದ ಸಾಧ್ಯತೆಯಿದೆ.
ಬೈರತಿ ಬಸವರಾಜ್ ಬಂಧನಕೆಕ ಈಗಾಗಲೇ ಮೂರು ತಂಡಗಳನ್ನು ಸಿಐಡಿ ರಚಿಸಿದೆ. ಎರಡು ತಂಡ ಮಹಾರಾಷ್ಟçದಲ್ಲಿ ಶೋಧ ಕಾರ್ಯ ನಡೆಸಿದ್ದರು. ಹೀಗಾಗಿ, ಇಂದು ಜಾಮೀನು ಸಿಗಬಹುದು ಎಂಭ ನಿರೀಕ್ಷೆಯಿತ್ತು. ಆದರೆ, ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸುವ ಮೂಲಕ ಬಂಧನದ ಸಾಧ್ಯತೆ ಹೆಚ್ಚಾಗಿದೆ.

