ಬೆಂಗಳೂರು: ಬ್ರೆಡ್ ಪ್ಯಾಕೆಟ್‌ನಲ್ಲಿ ಡ್ರಗ್ಸ್ ಅವಿತಿಟ್ಟು ಮುಂಬೈನಿAದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂಬ ಯುವತಿಯನ್ನು ಬಂಧಿಸಿರುವ ಪೊಲೀಸರು, ಈಕೆಯಿಂದ1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆಕೆಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತ ಯುವತಿ ವಿದ್ಯಾರ್ಥಿ ವೀಸಾದಡಿ ೨೦೨೪ರಲ್ಲಿ ವ್ಯಾಸಂಗಕ್ಕಾಗಿ ದೆಹಲಿಗೆ ಬಂದಿದ್ದಳು. ಕಾಲೇಜಿಗೆ ದಾಖಲಾಗದೆ, ಡ್ರಗ್ಸ್ ದಂಧೆಕೋರರ ನಂಟು ಬೆಳೆಸಿ ಮುಂಬೈನ ಹಲವು ಕಡೆಗಳಲ್ಲಿ ವಾಸವಾಗಿದ್ದಳು. ಮುಂಬೈನಲ್ಲಿದ್ದ ಸ್ನೇಹಿತ ನೀಡುವ ಮಾದಕವಸ್ತುಗಳನ್ನು ಹೇಳಿದ ಜಾಗಕ್ಕೆ ಡ್ರಗ್ಸ್ ಪೆಡ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು. ಅದೇ ರೀತಿ ಬೆಂಗಳೂರಿಗೆ ಕೊಕೇನ್ ಸಾಗಿಸಲು ಸಲುವಾಗಿ ಖಾಸಗಿ ಬಸ್ ಮೂಲಕ ಮುಂಬೈನಿAದ ಬೆಂಗಳೂರಿಗೆ ಬಂದಿದ್ದಳು.
ಅನುಮಾನ ಬರದಂತೆ ಬ್ರೆಡ್ ಪ್ಯಾಕೆಟ್‌ನಲ್ಲಿ ತುಂಡು ಮಾಡಿದ್ದ ಬ್ರೆಡ್‌ನಲ್ಲಿ ೧೨೧ ಗ್ರಾಂ ಕೊಕೇನ್ ಕವರ್ ಬಚ್ಚಿಟ್ಟಿದ್ದಳು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಇನ್‌ಸ್ಪೆಕ್ಟರ್ ರಕ್ಷಿತ್ ನೇತೃತ್ವದ ತಂಡ ಯುವತಿಯನ್ನು ಬಂಧಿಸಿದೆ.

