ಅಪರಾಧ ಸುದ್ದಿ

ಆಂಟಿ ಎಂದು ಕರೆದಿದ್ದಕ್ಕೆ ಕೋಪ: ಎಟಿಎಂ ಸೆಕ್ಯುರಿಟಿ ಗಾರ್ಡ್ ಗೆ ಕಪಾಳಮೋಕ್ಷ !

Share It

ಬೆಂಗಳೂರು: ಎಟಿಎಂಗೆ ಬಂದಿದ್ದ ಮಹಿಳೆಯೊಬ್ಬರಿಗೆ ಸೆಕ್ಯುರಿಟಿ ಗಾರ್ಡ್ ಆಂಟಿ ಎಂದು ಕರೆದ ಕಾರಣಕ್ಕೆ ಆಕೆ ಸಿಟ್ಟುಗೊಂಡು ಕಪಾಳಮೋಕ್ಷ ಮಾಡಿಜೀವಬೆದರಿಕೆ ಒಡ್ಡಿರುವ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.

ಎಟಿಎಂನಲ್ಲಿ ಹಣಕ್ಕೆ ಜನ ಕ್ಯೂ ನಿಂತಿದ್ದಾಗ ಅಲ್ಲಿನ ಸೆಕ್ಯುರಿಟಿ ಗಾರ್ಡ್, ಮಹಿಳೆಯನ್ನು ಆಂಟಿ ಸ್ವಲ್ಪ ಸೈಡಿಗೆ ನಿಲ್ಲಿ ಎಂದುಬಿಟ್ಟರು. ಅಷ್ಟಕ್ಕೆ ಉಗ್ರ ರೂಪ ತಾಳಿದ ಮಹಿಳೆ, ಚಪ್ಪಲಿಯಿಂದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ನನ್ನನ್ನೇ ಆಂಟಿ ಅಂತಿಯಾ ಎಂದು ಕಿಡಿಕಿಡಿಯಾಗಿ, ಕೊನೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ. ಜನ ಹೆಚ್ಚು ಸೇರಿಜೊಳ್ಳುತ್ತಿದ್ದಂತೆ ಮಹಿಳೆ ಅಲ್ಲಿಧ ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿ 60 ವರ್ಷದ ವೃದ್ಧರೊಬ್ಬರು ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಗೆ ಆಂಟಿ ಎಂದಿದ್ದಕ್ಕೆ ಜೀವಬೆದರಿಕೆ ಹಾಕಿರುವ ಹಾಗೂ ಚಪ್ಪಲಿಯಿಂದ ಥಳಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 60 ವರ್ಷದ ಸೆಕ್ಯುರಿಟಿ ಗಾರ್ಡ್ ಆಂಟಿ ಎಂದಿದ್ದಕ್ಕೆ ಸಿಟ್ಟು ಬಂದಿದ್ದೇನೋ ಸಹಜ. ಆದರೆ, ಅದಕ್ಕೆ ಅಷ್ಟು ವಯೋವೃದ್ಧ ವ್ಯಕ್ತಿಗೆ ಚಪ್ಪಲಿಯಲ್ಲಿ ಹೊಡೆದು, ಕೊಲೆ ಬೆದರಿಕೆ ಹಾಕುವುದೇನಿತ್ತು? ಎಂಬುದು ಯಕ್ಷ ಪ್ರಶ್ನೆ.


Share It

You cannot copy content of this page