ಉದಯಪುರ: ಬರ್ತಡೇ ಪಾರ್ಟಿಯಲ್ಲಿ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿಯ ಸಿಇಒ ಮತ್ತಿತರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉದಯಪುರ ಸುಖೇರಾ ಪ್ರದೇಶದಲ್ಲಿ ನಡೆದಿದೆ.
ಈ ಕುರಿತು ದೂರು ನೀಡಿರುವ ಮಹಿಳೆ, ತಮ್ಮ ಕಂಪನಿಯ ಸಿಇಒ ಮತ್ತು ಮಹಿಳಾ ಎಕ್ಸುಕ್ಯುಟೀವ್ ಹಾಗೂ ಆಕೆಯ ಪತಿ ತನಗೆ ಲೈಂಗಿಕ ಕಿರುಕುಳ ನೀಡಿ, ಪಾನಮತ್ತ ಪದಾರ್ಥಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಕಾರಿನಲ್ಲಿ ಕೊಂಡೊಯ್ದು ಮನೆಯಲ್ಲಿ ಕರೆದೊಯ್ದು ಸಾಮಾಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿ.೨೦ರಂದು ನಡೆದ ಘಟನೆಯಲ್ಲಿ ತಮ್ಮ ಕಂಪನಿಯ ಸಿಇಒ ಬರ್ತಡೇ ಪಾರ್ಟಿಯಲ್ಲಿ ಐಟಿ ಕಂಪನಿಯ ಉದ್ಯೋಗಿಗಳು ಭಾಗವಹಿಸಿದ್ದರು. ರಾತ್ರಿ ೯ರಿಂದ ನಡುರಾತ್ರಿ ೧.೩೦ರವರೆಗೆ ಪಾರ್ಟಿ ನಡೆದಿತ್ತು. ಅಲ್ಲಿ ದೂರುದಾರೆ ಮಹಿಳೆಗೆ ಕಂಠಪೂರ್ತಿ ಕುಡಿಸಿದ ಮತ್ತೊಬ್ಬ ಮಹಿಳೆ ಎಲ್ಲರನ್ನು ಕಳುಹಿಸಿ, ದೂರುದಾರೆಯನ್ನು ತನ್ನೊಂದಿಗೆ ಕರೆದೊಯ್ಯುವ ಭರವಸೆ ನೀಡಿದ್ದರು.
ಆಕೆಯ ಕಾರಿನಲ್ಲಿ ಕುಳಿತಾಗ ಅಲ್ಲಿಗೆ ಬಂದ ಆಕೆಯ ಗಂಡ ಮತ್ತು ಸಿಇಒ ಲೈಂಗಿಕ ಕಿರುಕುಳ ನೀಡಿದರು. ಕಾರಿನಲ್ಲಿಯೇ ಆಕೆಯೊಂದಿಗೆ ಲೈಂಗಿಕ ಕಿರುಕುಳ ನೀಡಿದರು ಎನ್ನಲಾಗಿದೆ. ಇದೆರ ಪುರಾವೆಗಳು ಕಾರಿನ ಡ್ಯಾಶ್‌ಕ್ಯಾಮ್ ನಲ್ಲಿ ದಾಖಲಾಗಿವೆ ಎಂದು ಹೇಳಲಾಗಿದೆ.
ಅನಂತರ ದೂರುದಾರೆಯನ್ನು ಮಹಿಳಾ ಉದ್ಯೋಗಿ ತನ್ನ ಮನೆಗೆ ಕರೆದೊಯ್ದು ಅಲ್ಲಿ, ಸಿಇಒ ಮತ್ತು ಮಹಿಳಾ ಉದ್ಯೋಗಿಯ ಗಂಡ ಬೆಳಗಿನ ಜಾವ ೫.೩೦ರವರೆಗೆ ಸಮಾಹಿಕ ಅತ್ಯಾಚಾರ ನಡೆಸಿದರು ಎನ್ನಲಾಗಿದೆ. ಈ ಅತ್ಯಾಚಾರಕ್ಕೆ ಮಹಿಳಾ ಉದ್ಯೋಗಿ ಸಹಾಯ ಮಾಡಿದ್ದರು ಎಂದು ದೂರಲಾಗಿದೆ.
ದೂರು ಸ್ವೀಕರಿಸಿರುವ ಉದಯಪುರ ಪೊಲೀಸರು, ಎಎಸ್‌ಪಿ ಮಾಧುರಿ ವರ್ಮಾ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದು, ಕಂಪನಿಯ ಸಿಇಒ, ಮಹಿಳಾ ಎಕ್ಸುಕ್ಯುಟೀವ್ ಹಾಗೂ ಆಕೆಯ ಪತಿಯನ್ನು ವಿಚಾರಣೆ ನಡೆಸಿದ್ದಾರೆ. ದೂರುದಾರೆಯ ಹೇಳಿಕೆಯನ್ನು ಪಡೆದಿದ್ದು, ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.

