ಮೈಸೂರು ಅರಮನೆ ಬಳಿ ಹೀಲಿಯಂ ಸಿಲೀಂಡರ್ ಸ್ಫೋಟ: ಮೃತ ಸಲೀಂ ಜತೆಗಿದ್ದ ಇಬ್ಬರ ಬಂಧನ
ಮೈಸೂರು: ಮೈಸೂರು ಅರಮನೆ ಬಳಿ ಹೀಲಿಯಂ ಸಿಲೀಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸಲೀಂ ಜತೆಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಲೂನ್ ವ್ಯಾಪಾರಿ ಸಲೀಂ ಉತ್ತರ ಪ್ರದೇಶದಿಂದ ಕಳೆದ ಹದಿನೈದು ದಿನಗಳ ಹಿಂದೆ ಮೈಸೂರಿಗೆ ಬಂದಿದ್ದ ಎನ್ನಲಾಗಿದೆ. ಆತ ಲಾಡ್ಜೊಂದರಲ್ಲಿ ರೂಮ್ ಬಾಡಿಗೆಗೆ ಪಡೆದು ವಾಸವಾಗಿದ್ದ. ಆತನ ಜತೆಗೆ ಮತ್ತಿಬ್ಬರು ಬಲೂನ್ ವ್ಯಾಪಾರ ಮಾಡುತ್ತಿದ್ದರು. ರೂಮ್‌ಗೆ ತಿಂಗಳೀಗೆ ಮೂರು ಸಾವಿರ ರು. ಬಾಡಿಗೆಗೆ ಮಾತನಾಡಿಕೊಂಡು ರೂಮ್ ಬುಕ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದೀಗ ಪೊಲೀಸರು ಈ ಎಲ್ಲ ಮಾಹಿತಿಯನ್ನು ಕಲೆಹಾಕುತ್ತಿದ್ದು, ಸಲೀಂ ಜತೆಗಿದ್ದವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಇಬ್ಬರು ಕೂಡ ಉತ್ತರ ಪ್ರದೇಶ ಮೂಲದವರು. ಈ ಇಬ್ಬರು ಸ್ಫೋಟದ ದಿನ ಬಲೂನ್ ಮಾರಾಟಕ್ಕೆ ಹೋಗಿರಲಿಲ್ಲ ಎಂಬುದು ಪೊಲೀಸರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.


