ಚಿತ್ರದುರ್ಗ ಬಸ್ ದುರಂತ: ತುರ್ತು ನಿರ್ಗಮನವಿಲ್ಲದಿದ್ದರೆ FC ನೀಡದಂತೆ ಸಾರಿಗೆ ಇಲಾಖೆ ಆದೇಶ
ಬೆಂಗಳೂರು: ಸಾರ್ವಜನಿಕ ಸಾರಿಗೆಗಳಲ್ಲಿ ತುರ್ತು ನಿರ್ಗಮದ ಬಾಗಿಲುಗಳಿಲ್ಲದಿದ್ದರೆ ಭೌತಿಕ ಕ್ಷಮತೆ ದೃಢೀಕರಣ ಪತ್ರ – ಎಫ್‌ಸಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಚಿತ್ರದುರ್ಗದ ಬಸ್ ಅಪಘಾತ ಪ್ರಕರಣದಲ್ಲಿ ಏಳು ಜನರ ಸಾವಿಗೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಹೊರಗೆ ಬರಲು ತುರ್ತು ನಿರ್ಗಮನ ಇಲ್ಲದಿರುವುದು ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಮಹತ್ವದ ತೀರ್ಮಾನಕ್ಕೆ ಸಾರಿಗೆ ಇಲಾಖೆ ಬಂದಿದೆ.
ಜತೆಗೆ, ಬಸ್‌ಗಳಲ್ಲಿ ಯಾವುದೇ ರೀತಿಯ ಸ್ಫೋಟಕಗಳನ್ನು ಸಾಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದೇವೆ. ಪ್ರಯಾಣಿಕರನ್ನು ಹೊರತುಪಡಿಸಿ ಅನಗತ್ಯವಾದ ಲಗೇಜ್‌ಗಳನ್ನು ಸಾಗಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.


