ತಹಸೀಲ್ದಾರ್ ಕಚೇರಿಗೆ ಬಂತು ಮೆಕ್ಕೆಜೋಳದ ಮೂಟೆಗಳು
ಹಾವೇರಿ: ಮೆಕ್ಕೆ ಜೋಳ ಖರೀದಿ ಮಾಡದ ತಾಲೂಕು ಆಡಳಿತದ ವಿರುದ್ಧ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಚೇರಿಗೆ ಮೆಕ್ಕೆಜೋಳ ತಂದು ಸುರಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ನೂರಾರು ಟ್ರಾಕ್ಟರ್ ಗಳಲ್ಲಿ ತಾಲೂಕು ಕಚೇರಿಗೆ ಆಗಮಿಸಿದ ರೈತರು ಮೆಕ್ಕೆಜೋಳದ ಮೂಟೆಗಳನ್ನು ತಂದು ತÀಹಸೀಲ್ದಾರರ ಕಚೇರಿ ಮುಂದೆ ಸುರಿದರು. ತಾಲೂಕು ಆಡಳಿತ 5 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಕೆಲವು ಜನರಿಂದ ಮಾತ್ರವೇ ಜೋಳ ಖರೀದಿ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಎರಡು ದಿನ ಖರೀದಿ ಪ್ರಕ್ರಿಯೆ ನಡೆಸಿ, ನಾಮಕಾವಸ್ತೆಗಾಗಿ ಕೆಲಸ ಮಾಡಲಾಗಿದೆ. ರೈತರ ಮೆಕ್ಕೆಜೋಳವನ್ನು ಖರೀದಿ ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಸ್ಥಿತಿ ನಿಭಾಯಿಸಿದ್ದಾರೆ.


