ಮುಟ್ಟಾದವರನ್ನು ಹೊರಗೆ ಕೂರಿಸುವಂತಿಲ್ಲ
ಮುಟ್ಟು ಪ್ರಕೃತಿಯ ನಿಯಮವೇ ಹೊರತು ಅದು ಸೂತಕವಲ್ಲ. ಆದರೆ ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಮುಟ್ಟಿನ ವಿಚಾರವಾಗಿ ಇರುವ ಧೋರಣೆ ತೀರ ಅನಿಷ್ಠ ಪದ್ಧತಿ ಅನಿಸುತ್ತದೆ. ಮುಟ್ಟಿನ ನೆಪದಲ್ಲಿ ಹೆಣ್ಣು ಮಕ್ಕಳನ್ನು ಮೂರು ದಿನ ಆರು ದಿನ, ಬಾಣಂತಿಯಾದರೆ ಮೂರು ತಿಂಗಳ ಕಾಲ ಹೊರಗಿಡುವ ಪದ್ಧತಿಗಳು ಕರ್ನಾಟಕದಲ್ಲಿವೆ. ಇದನ್ನು ಸೂಕ್ಷö್ಮವಾಗಿ ಗಮನಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿö್ಮ ಚೌದರಿ ಅವರು ಮುಟ್ಟಿನ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. ಚಿತ್ರದುರ್ಗ ಮತ್ತು ತುಮಕೂರು ಈ ಎರಡು ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳು ಅನಾಧಿ ಕಾಲದಿಂದಲೂ ಮುಟ್ಟಿನ ವಿಚಾವಾಗಿಯೇ ಶೋಷಣೆಗೆ ಒಳಗಾಗಿದ್ದಾರೆ. ಕಾಡುಗೊಲ್ಲರ ಹಟ್ಟಿಗಳಿಗೆ ಬೇಟಿ ನೀಡಿರುವ ಅವರು ತಿಳುವಳಿಕೆ ಹೇಳಿ ಇಂಥ ಪದ್ಧತಿಗಳನ್ನು ಮುಂದುವರಿಸುವAತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.



