ಜಯನಗರ ಆಸ್ಪತ್ರೆಯಲ್ಲಿ ಮಹಾ ಯಡವಟ್ಟು: O+ ರಕ್ತದ ಬದಲು A+ರಕ್ತ ನೀಡಿದ ಸಿಬ್ಬಂದಿ

Share It

ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಮಹಾ ಯಡವಟ್ಟೊಂದು ಮಾಡಿದ್ದು, ರಕ್ತಹೀನತೆಯೆಂದು ಬಂದ O+ ರಕ್ತದ ಗುಂಪು ಹೊಂದಿದ್ದ ರೋಗಿಗೆ A+ ರಕ್ತವನ್ನು ನೀಡಿದ್ದಾರೆ.

ಪುನೀತ್ ಸೂರ್ಯ ಎಂಬ ಯುವಕ ರಕ್ತಹೀನತೆಯ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರಿಗೆ O+ ರಕ್ತವನ್ನು ನೀಡುವಂತೆ ಲ್ಯಾಬ್ ಟೆಕ್ನೀಷಿಯನ್‌ಗೆ ಸೂಚನೆ ನೀಡಲಾಗಿತ್ತು. ಆದರೆ, ಆತ A+ರಕ್ತವನ್ನು ರೋಗಿಗೆ ಕೊಟ್ಟು ಸುಮ್ಮನಾಗಿದ್ದ. ಸ್ವಲ್ಪ ಸಮಯದ ನಂತರ ರೋಗಿಯ ಸಂಬAಧಿಯೊಬ್ಬರು ಇದನ್ನು ಗಮನಿಸಿ, ಆತನ ಗಮನಕ್ಕೆ ತಂದರು.

ಆಗ ಆತ ಉಡಾಫೆಯಿಂದ ಉತ್ತರ ನೀಡಿದ್ದು, ನನಗೆ ರಜೆ ಕೊಟ್ಟಿರಲಿಲ್ಲ. ಹೀಗಾಗಿ, ಯಡವಟ್ಟಾಗಿದೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ವೈದ್ಯರ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಯುವಕನನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ.


Share It

You May Have Missed

You cannot copy content of this page