ಬುಲ್ಡೋಜರ್ ರಾಜ್ ಮನಸ್ಥಿತಿ ಬಯಲಾಗಿದೆ: ಬೆಂಗಳೂರು ಒತ್ತುವರಿ ತೆರವಿಗೆ ಪಿಣರಾಯಿ ಸಿಟ್ಟು
ಬೆಂಗಳೂರು: ಕರ್ನಾಟಕದ ಬುಲ್ಡೋಜರ್ ರಾಜ್ ಮನಸ್ಥಿತಿ ಬಯಲಾಗಿದೆ. ಅಮಾಯಕರನ್ನು ಬುಲ್ಡೋಜರ್ ಬಳಸಿ ತೆರವು ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ನಡೆದ ಸ್ಲಂ ನಿವಾಸಿಗಳ ತೆರವು ಕಾರ್ಯದ ಕುರಿತು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದ ಬುಲ್ಡೋಜರ್ ರಾಜ್ ಮನಸ್ಥಿತಿ ಈ ಮೂಲಕ ಬಯಲಾಗಿದೆ. ಜನರನ್ನು ಅಮಾನುಷವಾಗಿ ತೆರವುಗೊಳಿಸಿ ಬೀದಿಗೆ ತಳ್ಳಲಾಗಿದೆ ಎಂದು ಗುಡುಗಿದ್ದಾರೆ.
ಇದು ಬಿಬಿಎಂಪಿಗೆ ಸೇರಿದ ಘನತ್ಯಾಜ್ಯ ನಿರ್ವಹಣೆ ಮಾಡುವ ಜಾಗವಾಗಿದ್ದು, ಅದನ್ನು ಅತಿಕ್ರಮವಾಗಿ ಪ್ರವೇಶ ಮಾಡಿ ಶೆಡ್ ಗಳನ್ನು ಹಾಕಲಾಗಿತ್ತು. ಹೀಗಾಗಿ, ಕಾನೂನುಬದ್ಧವಾಗಿಯೇ ತೆರವು ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕೇರಳ ಸಿಎಂ ಕರ್ನಾಟಕ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.


