ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ

Share It

ಚಾಮರಾಜನಗರ: ಅಯ್ಯಪ್ಪ ಮಾಲಧಾರಿಗಳು ಪಾದಯಾತ್ರೆಯ ಮೂಲಕ ತೆರಳಲು ಅರಣ್ಯ ಸಿಬ್ಬಂದಿ ತಡೆಹಾಕಿದ್ದು, ಇದು ಕೆಲಕಾಲ ಗೊಂದಲಕ್ಕೆ ಕಾರಣವಾಗಿದೆ.

ಚಾಮರಾಜನಗರದ ಮದ್ದೂರು ಚೆಕ್‌ಪೋಸ್ಟ್ ಬಳಿ ಅಯ್ಯಪ್ಪ ಮಾಲಾಧಾರಿಗಳಿಗೆ ತಡೆ ಹಾಕಿದ ಘಟನೆ ನಡೆದಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಾಗಿದ್ದು, ಪಾದಯಾತ್ರೆ ಮೂಳಕ ತೆರಳಿದರೆ ಅಪಾಯ ಎಂದು ಎಚ್ಚರಿಕೆ ನೀಡಿ, ತಡೆಯುವ ಪ್ರಯತ್ನ ನಡೆಸಿದರು.

ಆದರೆ, ಅಯ್ಯಪ್ಪ ಮಾಲಾಧಾರಿಗಳು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿ, ತಾವು ನಡೆದೇ ಹೋಗುತ್ತೇವೆ ಎಂದು ಪಟ್ಟುಹಿಡಿದರು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿ, ಅನುಮತಿ ನಿರಾಕರಿಸಿದರು.


Share It

You May Have Missed

You cannot copy content of this page