ಅಂಡರ್ 19 ವಿಶ್ವಕಪ್ ಗೆ ಭಾರತ ತಂಡ ಪ್ರಕಟ: ವೈಭವ್ ಸೂರ್ಯವಂಶಿಗೆ ಸ್ಥಾನ
ಮುಂಬೈ: ಜನವರಿ 15ರಿಂದ ಫೆಬ್ರವರಿ 6ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
IPL ಹಾಗೂ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆಯುಷ್ ಮ್ಹಾತ್ರೆ ತಂಡದ ನಾಯಕರಾಗಿದ್ದಾರೆ.
ತಂಡ ಇಂತಿದೆ: ಆಯುಷ್ ಮ್ಹಾತ್ರೆ(ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆ್ಯರೋನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು(ವಿಕೆಟ್ ಕೀಪರ್), ಹರ್ವನ್ಶ್ ಸಿಂಗ್(ವಿಕೆಟ್ ಕೀಪರ್), ಆರ್.ಎಸ್ ಆ್ಯಂಬ್ರಿಷ್, ಕಾನಿಷ್ಕ್ ಚೌಹಾಣ್, ಖಿಲಾನ್ ಎ. ಪಟೇಲ್, ಮೊಹಮ್ಮದ್ ಇನಾನೇ, ಹೆನಿಲೇ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್.


