ಇಲ್ಲಿನ ಅಧಿಕಾರಿಗಳು ಕೂಡ ಸ್ಥಳೀಯವಾಗಿ ಉತ್ಪಾದಿಸುವ ಈ ಬಿಯರ್‌ನ ಮೇಲೆ ಕಡಿಮೆ ತೆರಿಗೆ ಹಾಕುತ್ತಾರೆ, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಬಿಯರ್ ಲಭ್ಯವಾಗಲಿ ಎಂಬುದು ಇದರ ಉದ್ದೇಶವಾಗಿದೆ.
ಬಿಯರ್
ನಿಮಗೆ ಗೊತ್ತೇ ನೆರೆಯ ವಿಯೆಟ್ನಾಂನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಬಿಯರ್ ದೊರೆತರೆ ಒಂದು ಬಾಟಲಿ ನೀರು ತುಂಬಾ ದುಬಾರಿ ಎಂದು, ಹೌದು ನೀವು ಕೇಳಿದ್ದು ಸತ್ಯ, ಪ್ರಪಂಚದ ಅನೇಕ ಸ್ಥಳಗಳಲ್ಲಿ ಬಿಯರ್ ತುಂಬಾ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಅದರಲ್ಲೂ ವಿಯೆಟ್ನಾಂ ದೇಶ ಬಿಯರ್‌ನ ಹೊಳೆಯನ್ನೇ ಹರಿಸುತ್ತದೆ.
ಅದರಲ್ಲೂ ವಿಯೆಟ್ನಾಂ ಬಿಯಾ ಹೋಯಿ ಹೆಸರಿನ ಸ್ಥಳೀಯ ಬಿಯರ್ ಅನ್ನು ಗ್ಲಾಸ್‌ಗೆ 5,000 ರಿಂದ 10,000 ವಿಯೆಟ್ನಾಮೀಸ್ ಡಾಂಗ್ (ರೂ 18-35) ಗೆ ಮಾರುತ್ತಾರೆ. ಆದರಿಲ್ಲಿ ಅರ್ಧ ಲೀಟರ್ ನೀರಿನ ಬೆಲೆ ರೂ 30,000 ಡಾಂಗ್ (ರೂ. 102) ಎಂದರೆ ಅತಿಶಯವಾಗುವುದು ಖಂಡಿತ. ಇಲ್ಲಿ ಒಂದು ಬಾಟಲಿ ನೀರಿನ ಬೆಲೆಗೆ, ಗ್ರಾಹಕರು ಎರಡು, ಕೆಲವೊಮ್ಮೆ ಮೂರು ಗ್ಲಾಸ್ ಬಿಯರ್ ಖರೀದಿಸಬಹುದು.
ಬಿಯರ್ ತುಂಬಾ ಚೀಪ್ ಆಗಿ ದೊರೆಯುವ ಸ್ಥಳ
ಇಲ್ಲಿನ ಅತಿ ದೊಡ್ಡ ಫೈವ್ ಸ್ಟೋರ್ ಹೋಟೆಲ್‌ಗಳಲ್ಲಿ ಕೂಡ ಬಿಯರ್ ತುಂಬಾ ಚೀಪ್ ಆಗಿ ಸಿಗುತ್ತದೆ. ಇವುಗಳನ್ನು ಮಿನಿ ಬಾರ್‌ಗಳಲ್ಲಿ ಕೂಡ ಖರೀದಿಸಬಹುದು, ಇನ್ನು ಕೆಲವು ಹೋಟೆಲ್‌ಗಳು ಅತಿಥಿಗಳನ್ನು ಸಂತೋಷಪಡಿಸಲು ಅವರಿಗೆ ಉಚಿತ ಬಿಯರ್ ಅನ್ನು ಕೂಡ ಸರ್ವ್ ಮಾಡುತ್ತದೆ.
ವಿಯೆಟ್ನಾಂನಲ್ಲಿ ಸ್ಥಳೀಯವಾಗಿ ದೊರೆಯುವ ಬಿಯಾ ಹೋಯಿ ಏಕಿಷ್ಟು ಕಡಿಮೆಗೆ ದೊರೆಯುತ್ತದೆ ಎಂಬುದನ್ನು ನೋಡುವುದಾದರೆ ಈ ಬಿಯರ್‌ನ ಮೇಲೆ ಕಡಿಮೆ ತೆರಿಗೆ ವಿಧಿಸಲಾಗುತ್ತದೆ. ಇನ್ನು ಈ ಬಿಯರ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ ಹಾಗೆಯೇ ಉತ್ಪಾದನೆ ಕೂಡ ತುಂಬಾ ಅಗ್ಗವಾಗಿದೆ.
ಇದರಲ್ಲಿ ಆಲ್ಕೋಹಾಲ್ ಅಂಶ ಕೇವಲ 2-3% ವಾಗಿದ್ದು ಇದನ್ನು ಯಾವುದೇ ಬಾಟಲಿ ಇಲ್ಲವೇ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗುವುದಿಲ್ಲ. ಹಾಗೆಯೇ ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆಯಲ್ಲಿ ಸ್ಟಾಕ್ ಅನ್ನು ತೆರವುಗೊಳಿಸುವ ಒತ್ತಡ ಕೂಡ ಮಾರಾಟಗಾರರ ಮೇಲಿರುತ್ತದೆ.
ಇಲ್ಲಿನ ಅಧಿಕಾರಿಗಳು ಕೂಡ ಸ್ಥಳೀಯವಾಗಿ ಉತ್ಪಾದಿಸುವ ಈ ಬಿಯರ್‌ನ ಮೇಲೆ ಕಡಿಮೆ ತೆರಿಗೆ ಹಾಕುತ್ತಾರೆ, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಬಿಯರ್ ಲಭ್ಯವಾಗಲಿ ಎಂಬುದು ಹಿಂದಿರುವ ಉದ್ದೇಶವಾಗಿದೆ.
ನೀರು ತುಂಬಾ ದುಬಾರಿ ಏಕೆ?
ಟ್ಯಾಪ್ ವಾಟರ್ ಅನ್ನು ಸಂಸ್ಕರಿಸದೆ, ಶುದ್ಧೀಕರಿಸದೆ ಹಾಗೆಯೇ ಕುಡಿಯುವಂತಿಲ್ಲ ಇದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಇಲ್ಲಿ ನೀರು ತುಂಬಾ ದುಬಾರಿಯಾಗಿದೆ. ಬಾಟಲಿ ನೀರು, ಬ್ರ್ಯಾಂಡಿಂಗ್, ಸಾರಿಗೆ ಹೀಗೆ ಒಂದು ಬಾಟಲಿ ನೀರು ತುಂಬಾ ವೆಚ್ಚದಾಯಕವಾಗಿದೆ.
ಹಾಗಾಗಿ ನೀರಿಗಾಗಿ ಇಲ್ಲಿನ ನಿವಾಸಿಗಳು ಹೆಚ್ಚು ಹಣ ಕೊಡಬೇಕು. ಆದರೆ ಬಿಯರ್‌ಗೆ ಮಾತ್ರ ಸರ್ಕಾರಗಳು ಭಾರೀ ತೆರಿಗೆ ವಿಧಿಸುವುದನ್ನು ತಪ್ಪಿಸಿರುವ ಸಾಮಾಜಿಕ ಸಂಪ್ರದಾಯದ ಭಾಗವಾಗಿ ಉಳಿದಿದೆ. ವಿಶ್ವದ ಅತಿ ಹೆಚ್ಚು ತಲಾ ಬಿಯರ್ ಗ್ರಾಹಕರಲ್ಲಿ ವಿಯೆಟ್ನಾಂ ಸ್ಥಾನ ಪಡೆದಿದೆ. ಪ್ರಮುಖ ನಗರಗಳಲ್ಲಿ ಸಂಜೆ ಜನಸಂದಣಿ ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಬಿಯರ್ ನೀರಿನಂತೆ ಕಂಡುಬರುತ್ತದೆ.
ತಡರಾತ್ರಿಯವರೆಗೆ ಬಿಯರ್‌ನ ಸಪ್ಲೈ ಕೂಡ ಇರುತ್ತದೆ. ಮೆಕ್ಸಿಕೋ, ಜಮೈಕಾ ಮತ್ತು ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಕೂಡ ಸ್ಥಳೀಯ ಬಿಯರ್ ಲಭ್ಯವಾಗಿದೆ. ವೈನ್‌ನೊಂದಿಗೆ ಮಿನಿ ಬಾರ್‌ಗಳಲ್ಲಿ ಕೂಡ ಅಗ್ಗದ ಬಿಯರ್ ಲಭ್ಯವಾಗುತ್ತದೆ.
ಯಾವುದೇ ಹೆಚ್ಚುವರಿ ಹಣವಿಲ್ಲದೆ ಇವುಗಳನ್ನು ರಿಸ್ಟೋರ್ ಕೂಡ ಮಾಡಲಾಗುತ್ತದೆ. ಅತಿಥಿಗಳು ತಮ್ಮ ಪ್ಯಾಕೇಜ್‌ನ ಭಾಗವಾಗಿ ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪೂಲ್‌ಸೈಡ್ ಕೌಂಟರ್‌ಗಳಲ್ಲಿ ಅನ್‌ಲಿಮಿಟೆಡ್ ಡ್ರಿಂಕ್ಸ್ ಅನ್ನು ಆನಂದಿಸಬಹುದು. ಕೆಲವು ಐಷಾರಾಮಿ ಸೂಟ್‌ಗಳಲ್ಲಿ ವಿಸ್ಕಿ, ರಮ್, ವೋಡ್ಕಾ ಕೂಡ ಫ್ರೀಯಾಗಿ ದೊರೆಯುತ್ತದೆ.
ಈ ದೇಶಗಳಲ್ಲಿ ಬಿಯರ್ ಫ್ರೀ ಆಗಿ ದೊರೆಯುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕೂಡ ಬಿಯರ್ ಸಂಸ್ಕೃತಿಯ ಒಂದು ಭಾಗವಾಗಿ ಒಳಗೊಂಡಿದ್ದು, ಅತಿಥಿ ಸತ್ಕಾರದ ಒಂದು ಭಾಗವಾಗಿ ಕಾಣಲಾಗುತ್ತದೆ. ಜಪಾನ್‌ನಲ್ಲಿ, ಹೋಟೆಲ್ ಸರಪಳಿ ಲೈವ್ಲಿ ಹೋಟೆಲ್ಸ್ “ಉಚಿತ ಬಿಯರ್ ಅವರ್” ಅನ್ನು ಪರಿಚಯಿಸಿದೆ, ಟೋಕಿಯೊ ಮತ್ತು ಒಸಾಕಾದಲ್ಲಿನ ಆಸ್ತಿಗಳಲ್ಲಿ ಅತಿಥಿಗಳು ಪ್ರತಿದಿನ ಸಂಜೆ ಒಂದು ಗಂಟೆಯವರೆಗೆ ಅನಿಯಮಿತ ಬಿಯರ್ ಅನ್ನು ಆನಂದಿಸಬಹುದು.
ಮದ್ಯ ಎಲ್ಲೆಲ್ಲಿ ಕಾಸ್ಟ್ಲಿ?
ಕತಾರ್‌ನಲ್ಲಿ ಬಿಯರ್ ತುಂಬಾ ದುಬಾರಿಯಾಗಿದ್ದು, ಇದನ್ನು ವಿಶ್ವದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾಗಿಸಿದೆ. ಮಧ್ಯದ ಬಾಟಲಿ ಮೇಲೆ ಸಿನ್ ಟ್ಯಾಕ್ಸ್ ಅನ್ನು ಹಾಕುವುದರಿಂದ ಅದನ್ನು ಎಲ್ಲಿ ಮಾರಾಟ ಮಾಡಬಹುದು ಎಂಬುದರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಲಾಗುತ್ತದೆ ಹಾಗಾಗಿ ಒಂದು ಪಿಂಟ್ ಬಿಯರ್‌ಗೆ ರೂ. 990-ರೂ. 1,100 ಬೆಲೆ ವಿಧಿಸಲಾಗಿದೆ. ಆಲ್ಕೋಹಾಲ್ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಐಸ್ಲ್ಯಾಂಡ್ ಮತ್ತು ನಾರ್ವೆಯಲ್ಲಿಯೂ ಕೂಡ ಬಿಯರ್ ದುಬಾರಿಯಾಗಿದೆ.

