ಬೆಂಗಳೂರು: ಹೊಸ ವರ್ಷದ ಆರಂಭದ ಹೊತ್ತಿನಲ್ಲೇ ಪೊಲೀಸರು ಬಹುದೊಡ್ಡ ಡ್ರಗ್ಸ್ ಮಾಫಿಯಾವನ್ನು ಪೊಲೀಸರು ಬೇಧಿಸಿದ್ದಾರೆ.
ಮಹಾರಾಷ್ಟ್ರದ ಎಎನ್ ಟಿಫ್ ದಾಳಿ ನಡೆಸಿ, ಸುಮಾರು 55.8 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ನಾಲ್ವರು ಆರೋಪಗಳನ್ನು ಬಂಧಿಸಿದ್ದು, ಪ್ರಮುಖ ಕಿಂಗ್ ಪಿನ್ ಗಳ ಪತ್ತೆಗೆ ಬಲೆ ಬೀಸಲಾಗಿದೆ.
ನಗರದ ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಭಾಗದಲ್ಲಿ ಈ ಫ್ಯಾಕ್ಟರಿ ಗಳು ಕಾರ್ಯನಿರ್ವಹಿಸುತ್ತಿದ್ದವು ಎನ್ನಲಾಗಿದೆ. ರಾಜಸ್ಥಾನ ಮೂಲದ ಕಿಂಗ್ ಪಿನ್ ಗಳು ಡ್ರಗ್ಸ್ ಮಾಫಿಯಾದ ಉಸ್ತುವಾರಿಗಳಾಗಿದ್ದರು ಎಂಬ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

