ಬೆಂಗಳೂರು: 19 ವರ್ಷದಿಂದ ನಡೆಯುತ್ತಿದ್ದ ಕೌಟುಂಬಿಕ ವ್ಯಾಜ್ಯವೊಂದು ಹೊಸ ಟ್ವಿಸ್ಟ್ ಮೂಲಕ ವಜಾಗೊಂಡಿರುವ ಘಟನೆ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
ಬೋರವೆಲ್ಲಿ ನ್ಯಾಯಾಲಯದಲ್ಲಿ 2009 ರಿಂದ ಕೌಟುಂಬಿಕ ವ್ಯಾಜ್ಯವೊಂದು ನಡೆಯುತ್ತಿತ್ತು. ಪತ್ನಿ ತನ್ನ ಪತಿಯ ವಿರುದ್ಧ ಪ್ರಕರಣ ದಾಖಲಿಸಿ, ಪ್ರತಿ ತಿಂಗಳು 3200 ರು. ನಿರ್ವಹಣಾ ಭತ್ಯೆ ಪಡೆದುಕೊಳ್ಳುತ್ತಿದ್ದರು.
ಆದರೆ, ಇತ್ತೀಚೆಗೆ ನಡೆದ ವಿಚಾರಣೆ ವೇಳೆ ಮೊದಲನೇ ಪತಿ, ಆಕೆಯ ಎರಡನೇ ಪತಿಯನ್ನೇ ವಿಟ್ನೆಸ್ ಬಾಕ್ಸ್ಗೆ ತಂದು ನಿಲ್ಲಿಸಿ, ಸಾಕ್ಷಿಯನ್ನಾಗಿಸುವ ಮೂಲಕ ಆಕೆಗೆ ಎರಡನೇ ಮದುವೆಯಾಗಿದೆ ಎಂಬುದನ್ನು ಸಾಭೀತು ಮಾಡಿದ್ದಾರೆ. ಹೀಗಾಗಿ, ಇವರಿಬ್ಬರ ನಡುವಿನ ಕೌಟುಂಬಿಕ ವ್ಯಾಜ್ಯವನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಧೀಶರಾದ ಬಿ.ಎನ್.ಚಿಕ್ನೆ ಅವರು, ಈಗಾಗಲೇ ಆಕೆಗೆ ಎರಡನೇ ಮದುವೆಯಾಗಿದೆ ಎಂಬುದನ್ನು ಮುಚ್ಚಿಟ್ಟು ನಿರ್ವಹಣಾ ಭತ್ಯೆ ಪಡೆಯಲಾಗುತ್ತಿದ್ದು, ಅದನ್ನು ಮುಂದುವರಿಸಲು ಸಾಧ್ಯವಿಲ್ಲ. ಇನ್ಮುಂದೆ ಯಾವುದೇ ನಿರ್ವಹಣೆ ಭತ್ಯೆ ನೀಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
ಮದುವೆಗೆ ಸಾಕ್ಷಿಯಾದ ಇಮಾಮ್ ಅನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಜತೆಗೆ ಆಕೆಯ ಸಹಿಯನ್ನು ದೃಢೀಕೃತಗೊಳಿಸುವ ಜತೆಗೆ, ಎರಡನೇ ಪತಿಯನ್ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

