ಬೆಂಗಳೂರು: ಡ್ರಗ್ಸ್ ಮಾಫಿಯಾದ ಜಾಡು ಹಿಡಿದು ಹೊರಟಿರುವ ಖಾಕಿ ಪಡೆ, ಪ್ರಮುಖ ರಾಜಕೀಯ ನಾಯಕರ ಹಿಂಬಾಲಕರಿಗೆ ಬಿಸಿಮುಟ್ಟಿಸಿದ್ದಾರೆ.
ಡಿ೨೩ರಂದು ಡ್ರಗ್ಸ್ ದಂದೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಲಾಗಿತ್ತು. ಮಾಹಿತಿಯ ಮೇರೆಗೆ ಕಾಂಗ್ರೆಸ್ ಮುಖಂಡ ವೇದಮೂರ್ತಿ ಸೇರಿ ನಾಲ್ವರನ್ನು ಬಂಧನ ಮಾಡಲಾಗಿದೆ. ವೇದಮೂರ್ತಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಪ್ತ ಎನ್ನಲಾಗಿದೆ.
ಪ್ರಕರಣದಲ್ಲಿ ಮತ್ತೊಬ್ಬ ಸಚಿವ ಜಮೀರ್ ಅಹಮದ್ ಆಪ್ತ ಎನಿಸಿಕೊಂಡಿರುವ ಅನ್ವರ್ ಭಾಷಾ, ಪಾರಸ್, ಕೃಷ್ಣಮೂರ್ತಿ, ದೋನಿ ಆಲಿಯಾಸ್ ಮಂಜುನಾಥ್ ನನ್ನು ಬಂಧಿಸಲಾಗಿದೆ. ಬಂಧಿತರಿAದ ೯೦ ಗ್ರಾಂ ಎಂಡಿಎAಎ, ಸಿಂಥೆಟಿಕ್ಸ್ ಟ್ಯಾಬ್ಲೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ.

