ಉಪಯುಕ್ತ ಸುದ್ದಿ

ತಿರುಪತಿ ದರ್ಶನಕ್ಕೆ ಹೊಸ ನಿಯಮ: ವೈಕುಂಠ ಏಕಾದಶಿಗೆ ಆನ್‌ಲೈನ್ ಟಿಕೆಟ್ ಕಡ್ಡಾಯ

Share It

ತಿರುಪತಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದೇಗುಲದಲ್ಲಿ ವೈಕುಂಠ ದ್ವಾರವನ್ನು ತೆರೆಯಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸುತ್ತಿದ್ದಾರೆ.

ಟಿಟಿಡಿ ಪ್ರಕಟಿಸಿದ ಮಾಹಿತಿಯಂತೆ ಡಿಸೆಂಬರ್ 30, 31 ಹಾಗೂ ಜನವರಿ 1ರಂದು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಂಡಿರುವ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂರು ದಿನಗಳಲ್ಲಿ ಟಿಕೆಟ್ ಇಲ್ಲದವರಿಗೆ ದೇಗುಲ ಪ್ರವೇಶ ಇರುವುದಿಲ್ಲ. ವೈಕುಂಠ ದ್ವಾರವು ಜನವರಿ 8ರವರೆಗೆ ತೆರೆದಿರಲಿದೆ.

ವೈಕುಂಠ ಏಕಾದಶಿ ಪ್ರಯುಕ್ತ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ಶ್ರೀವಾರಿ ದರ್ಶನ ಪಡೆದರು. ದರ್ಶನದ ಬಳಿಕ ಪುರೋಹಿತರು ಅವರಿಗೆ ರೇಷ್ಮೆ ವಸ್ತ್ರಗಳನ್ನು ನೀಡಿ ಗೌರವಿಸಿ ಪ್ರಸಾದವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಆಂಧ್ರಪ್ರದೇಶ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವೆ ಎಸ್. ಸವಿತಾ, ಗಣಿ ಸಚಿವ ಕೆ. ರವೀಂದ್ರ ಹಾಗೂ ನಟ ಚಿರಂಜೀವಿ ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದಿದ್ದಾರೆ.

ವೈಕುಂಠ ದ್ವಾರವು ವರ್ಷದಲ್ಲಿ ಈ ವಿಶೇಷ ಅವಧಿಯಲ್ಲಿ ಮಾತ್ರ ತೆರೆಯಲಾಗುತ್ತಿದ್ದು, ಜನವರಿ 8ರಂದು ಮುಚ್ಚಲ್ಪಡುವುದು. ಈ ದಿನಗಳ ಹೊರತು ಉಳಿದ ಸಮಯದಲ್ಲಿ ವೈಕುಂಠ ದ್ವಾರವನ್ನು ತೆರೆಯಲಾಗುವುದಿಲ್ಲ.


Share It

You cannot copy content of this page