ಹುಬ್ಬಳ್ಳಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ತಂದೆ ಹಾಗೂ ಎರಡು ವರ್ಷದ ಮಗ ಮೃತಪಟ್ಟು, ನಾಲ್ಕು ವರ್ಷದ ಹೆಣ್ಣುಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಗ್ಗೆ ಹುಬ್ಬಳ್ಳಿ-ಕಾರವಾರ ರಸ್ತೆಯ ಅಂಚಟಗೇರಿ ಬಳಿ ನಡೆದ ಅಪಘಾತದಲ್ಲಿ ತಡಸದ ಮೆಹಬೂಬ್ ಖಾನ್ ಉಸ್ತಾದಿ (೩೬), ಅಸ್ನೇನ್ (೨) ಮೃತಪಟ್ಟಿದ್ದು, ಅಜೀಜಾ ಎಂಬ ನಾಲ್ಕು ವರ್ಷದ ಹೆಣ್ಣುಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹುಬ್ಬಳ್ಳಿಯಿAದ ತಡಸಕ್ಕೆ ಹೋಗುವಾಗ ಮೆಹಬೂಬ್ ಅವರು ಓವರ್‌ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಬಾಲಕಿಯನ್ನು ಚಿಕಿತ್ಸೆಗೆ ನಗರದ ಕೆಎಂಸಿಆಎರ್‌ಐ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

