ಬೆಂಗಳೂರು: ಹೊಸ ವರ್ಷದ ಪಾರ್ಟಿಯಲ್ಲಿ ಕುಡಿದು ಚಿತ್ತಾದವರನ್ನು ಮನೆಗೆ ಕರದೊಯ್ದು ಬಿಡುವ ಯೋಜನೆಯನ್ನು ಸರಕಾರ ಕೈಬಿಟ್ಟಿದ್ದು, ಇದ್ದಲ್ಲಿಯೇ ಮಲಗಲು ವ್ಯವಸ್ಥೆ ಮಾಡಲು ತೀರ್ಮಾನಿಸಿದೆ.
ಕುಡಿದು ಟೈಟಾದವರನ್ನು ಮನೆಗೆ ಬಿಡುವ ವಾಹನದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುವ ಮೂಳಕ ಗೃಃಸಚಿವ ಡಾ ಜಿ ಪರಮೇಶ್ವರ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿರ್ಧಾರದಿಂದ ವಾಪಸ್ ಹಿಂದೆ ಸರಿದಿದ್ದು, ಈಗ ಕುಡಿದು ಟೈಟಾದವರನ್ನು ಮನೆಗೆ ಬಿಡುವ ಬದಲು ಇರುವಲ್ಲಿಯೇ ಹಾಲ್ಟಿಂಗ್ ಸ್ಪಾಟ್ಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ.
ಇದಕ್ಕಾಗಿ ನಗರದಲ್ಲಿ 160 ಹಾಲ್ಟಿಂಗ್ ಸ್ಪಾಟ್ಗಳನ್ನು ತೆರೆಯಲಾಗಿದೆ. ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗುಬಂತಹ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮಲಗಲು ವ್ಯವಸ್ಥೆ ಸೇರಿ ಕೆಲವ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

