ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧ ಮಾಡಲಾಗಿದೆ.
ಜಿಲ್ಲೆಯ ಸ್ಕಂದಗಿರಿ, ಕೈವಾರ ಬೆಟ್ಟಗಳಲ್ಲಿ ಟ್ರಕ್ಕಿಂಗ್ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿ.೩೦ರ ಸಂಜೆ ಯಾವುದೇ ಕಾರಣಕ್ಕೆ ಬೆಟ್ಟದ ವ್ಯಾಪ್ತಿಗೆ ತೆರಳುಂತಿಲ್ಲ. ಅಂತೆಯೇ ಜ.೧ರಂದು ಬೆಟ್ಟಗಳಿಗೆ ಪ್ರವೇಶವಿಲ್ಲ ಎಂದು ಹೇಳಲಾಗಿದೆ.
ಜಾರಣ ಪ್ರದೇಶಗಳಲ್ಲಿ ಪಾರ್ಟಿ ನೆಪದಲ್ಲಿ ಕಲುಷಿತಗೊಳಿಸುವು, ಅನೈತಿಕ ಚಟುವಟಿಕೆ ನಡೆಸುವುದು ಮತ್ತಿತ್ತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯಬಹುದು ಎಂಬ ಕಾರಣಕ್ಕೆ ಟ್ರಕ್ಕಿಂಗ್ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

