ಬೆಂಗಳೂರು: ಕೋಗಿಲು ಮನೆಗಳ ಒತ್ತುವರಿ ತೆರವು ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದ್ದು, ಅಕ್ರಮ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬಾರದು ಎಂದು ಒತ್ತಾಯಿಸಿದೆ.
ಆರ್.ಅಶೋಕ್ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿದ್ದು, ಅನಧಿಕೃತ ಮನೆಗಳ ತೆರವು ಪ್ರದೇಶದ ವೀಕ್ಷಣೆ ನಡೆಸಿದರು. ಇಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಕೇರಳ ಸರಕಾರದ ಒತ್ತಾಯದ ಮೇರೆಗೆ ಮನೆ ನಿರ್ಮಿಸಿ ಕೊಡಲು ಸರಕಾರ ತೀರ್ಮಾನಿಸಿದ್ದು, ಇದನ್ನು ಬಿಜೆಪಿ ನಾಯಕರು ವಿರೋಧಿಸಿದರು.
ಘಟನೆಗೆ ಸಂಬAಧಿಸಿದAತೆ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಸತ್ಯಶೋಧನೆ ಸಮಿತಿಯನ್ನು ರಚನೆ ಮಾಡಿ ಒಂದು ವಾರದಲ್ಲಿ ವರದಿ ನೀಡುವಂತೆ ಹೇಳಲಾಗಿದೆ. ನಿಯೋಗದಲ್ಲಿ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಡಾ.ಸಿ.ಎಸ್.ಅಶ್ವತ್ಥ ನಾರಾಯಣ್, ವಿಶ್ವನಾಥ್ ಸೇರಿ ಅನೇಕರು ಇದ್ದರು.

