ಬೆಂಗಳೂರು: ಕೋಗಿಲು ಕ್ರಾಸ್‌ನ ಅತಿಕ್ರಮ ಒತ್ತುವರಿದಾರರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಪರ್ಯಾಯ ಪ್ಲಾಟ್ ವ್ಯವಸ್ಥೆ ಕಲ್ಪಿಸಿಕೊಡಲು ಸರಕಾರ ಮುಂದಾಗಿದೆ.
ಕೋಗಲಿ ಕ್ವಾರೆಯಿಂದ ಐದು ಕಿ.ಮೀ ದೂರದಲ್ಲಿರುವ ಬಂಡೆಹೊಸೂರಿನ ಬಯ್ಯಪ್ಪನಹಳ್ಳಿಯಲ್ಲಿರೋ ರಾಜೀವ್ ಗಾಂಧಿ ವಸತಿ ಯೋಜನೆಯ ಅಪಾರ್ಟ್ಮೆಂಟ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಸರಕಾರ ತೀರ್ಮಾನಿಸಿದೆ.
ಅಪಾಟ್‌ಮೆಂಟ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಎಲೆಕ್ಟಿçಕ್ ಕಾಮಗಾರಿ ಮತ್ತು ಲಿಫ್ಟ್ ಅಳವಡಿಕೆಯಂತಹ ಕೆಲವು ಸಣ್ಣಪುಟ್ಟ ಕೆಲಗಳು ಬಾಕಿ ಉಳಿದಿವೆ.
ಅಪಾಟ್‌ಮೆಂಟ್‌ನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ೧ ಬಿಎಚ್‌ಕೆ ಪ್ಲಾಟ್‌ಗಳಿದ್ದು, ಇಲ್ಲಿ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.

