ಬೆಂಗಳೂರು: ಲಿಫ್ಟ್ ಕೊಡುವ ನೆಪದಲ್ಲಿ ಚಲಿಸುವ ವಾಹನದಲ್ಲಿಯೇ ಆಕೆಯ ಮೇಲೆ ಸಾಮಾಜಿಕ ಅತ್ಯಾಚಾರ ನಡೆಸಿ, ಕೊನೆಗೆ ಆಕೆಯನ್ನು ಕಳಗೆ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.
ಗುರುಗ್ರಾಮ-ಫರಿದಾಬಾದ್ ನಡುವಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯ ಮುಖಕ್ಕೆ 12 ಹೊಲಿಗೆಗಳನ್ನು ಹಾಕಲಾಗಿದೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
26 ವರ್ಷದ ಯುವತಿ ಮನೆಯಲ್ಲಿ ತಾಯಿ ಜತೆಗೆ ಜಗಳ ಮಾಡಿಕೊಂಡು ತನ್ನ ಸ್ನೇಹಿತೆ ಮನೆಗೆ ಹೋಗಲು ಸುಮಾರು8.30 ರಲ್ಲಿ ಹೊರಗೆ ಬಂದಿದ್ದರು. ಈ ವೇಳೆ ಘಟನೆ ನಡೆದಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಉತ್ತರ ಪ್ರದೇಶ ಹಾಗೂ ಮತ್ತೊಬ್ಬ ಆರೋಪಿ ಮಧ್ಯಪ್ರದೇಶ ಮೂಲದವರಾಗಿದ್ದು, ಯುವತಿಗೆ ಯಾವುದೇ ಪರಿಚಯವಿಲ್ಲ ಎನ್ನಲಾಗಿದೆ. ಪೊಲೀಸರು ತಬಿಖೆ ಮುಂದುವರಿಸಿದ್ದಾರೆ.

