ಅಪರಾಧ ಸುದ್ದಿ

ಪ್ರತಿಭಟನೆ ವೇಳೆ ಪೊಲೀಸರ ಕೆನ್ನೆಗೆ ಭಾರಿಸಿದ ಸ್ವಾಮೀಜಿ

Share It

ವಿಜಯಪುರ: ಪ್ರತಿಭಟನೆ ನಡೆಸಲು ತಡೆಯೊಡ್ಡಿದ ಪೊಲೀಸರ ಕೆನ್ನೆಗೆ ಸ್ವಾಮೀಜಿಯೊಬ್ಬರು ಭಾರಿಸಿದ ಪ್ರಕರಣ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ-ಸೊಲ್ಲಾಪುರ ಹೆದ್ದಾರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನೆಕಾರರು ಸ್ವಾಮೀಜಿ ನೇತೃತ್ವದಲ್ಲಿ ಎಂ.ಬಿ.ಪಾಟೀಲ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ್ದರು. ಈ ವೇಳೆ ತಳ್ಳಾಟದಲ್ಲಿ ಘಟನೆ ನಡೆದಿದೆ.

ಎಂ.ಬಿ.ಪಾಟೀಲ್ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಸ್ವಾಮೀಜಿ ನೇತೃತ್ವದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ನೂಕಾಟದಲ್ಲಿ ಸ್ವಾಮೀಜಿ ಅವರನ್ನು ಪೊಲೀಸರು ತಳ್ಳಾಡಿದರು. ಇದರಿಂದ ಕೋಪಗೊಂಡ ಸ್ವಾಮೀಜಿ ಪೊಲೀಸರ ಕೆನ್ನೆಗೆ ಭಾರಿಸಿದ್ದಾರೆ.

ಪಿಎಸ್‌ಐ ಲಮಾಣಿ ಮತ್ತು ಇನ್ನಿಬ್ಬರು ಕಾನ್ಸ್ ಟೇಬಲ್‌ಗಳ ಕೆನ್ನೆಗೂ ಗೂಸಾ ಬಿದ್ದಿದೆ. ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸುತ್ತಾರಾ? ಅಥವಾ ಹೇಗೆ ಎಂಬುದನ್ನೂ ಕಾದು ನೋಡಬೇಕಿದೆ. ಸಧ್ಯಕ್ಕಂತೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Updating…


Share It

You cannot copy content of this page