ಬೆಂಗಳೂರು: ಬಳ್ಳಾರಿಯ ರೆಡ್ಡಿ ನಿವಾಸದ ಬಳಿಯ ಬ್ಯಾನರ್ ಗಲಾಟೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸುವಂತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ಮಲಾಗಿದೆ.
ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಗಲಾಟೆ ಮಾಡಲಾಗಿತ್ತು. ಅವರ ಗನ್ ಮ್ಯಾನ್ ಸಿಡಿಸಿದ ಗುಂಡು ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಬಲಿ ಪಡೆದಿದೆ. ಆದರೆ, ಫೈರಿಂಗ್ ನಮ್ಮ ಕಡೆಯಿಂದ ಆಗಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಆದರೆ, ರೆಡ್ಡಿ, ಶ್ರೀರಾಮುಲು ವಿರುದ್ಧ ಪೊಲೀಸರು FIR ದಾಖಲು ಮಾಡಿದ್ದಾರೆ.
ಹೀಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಮಡೆಸುವ ಮೂಲಕ ಸರಕಾರದ ವಿರುದ್ಧ ಸಮರ್ಥವಾಗಿ ಸೆಣೆಸಾಟ ನಡೆಸುವಂತೆ ಸೂಚನೆ ನೀಡಲಾಗಿದೆ. ಇದು ಸರಕಾರವೇ ಮಾಡಿಸಿರುವ ಗಲಾಟೆ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿಯಿದೆ.

