ಉಪಯುಕ್ತ ಸುದ್ದಿ

ತ್ಯಾಜ್ಯ ಸಂಸ್ಕರಣೆಗೆ ಮಾದರಿ ಕೋರಮಂಗಲದ ಕಸ-ರಸ ಕೇಂದ್ರ : ಸಚಿವ ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿಯ ಯೋಜನೆ

Share It

ಬೆಂಗಳೂರು: ರಾಮಲಿಂಗಾ ರೆಡ್ಡಿ ಅವರಂತಹ ಜನಪ್ರತಿನಿಧಿ ಪ್ರತಿಯೊಂದು‌ ಕ್ಷೇತ್ರಕ್ಕೂ ದೊರೆತರೆ ಆ‌ ಒಂದು‌ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಆಗುವುದರಲ್ಲಿ‌ ಎರಡು ಮಾತಿಲ್ಲ ಎಂಬುದಕ್ಕೆ‌ಉದಾಹರಣೆ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದ ಕಸ‌ರಸ ಕೇಂದ್ರ ಎನ್ನಬಹುದು.

ಬಿಟಿಎಂ ವಿಧಾನಸಭಾ ಕ್ಷೇತ್ರ Solid Waste Management ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದೇಶಕ್ಕೆ ಮಾದರಿಯಾಗಿರುವ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ

ಕೋರಮಂಗಲದ ಕಸ ರಸ ಕೇಂದ್ರ  ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯ ಹೊಂದಿದ ಕೇಂದ್ರವನ್ನು ಸ್ಥಾಪಿಸುವ ದೂರದೃಷ್ಟಿಯ ಕನಸನ್ನು ಕಂಡವರು. ಅವರ ಸ್ಪಷ್ಟ ದೃಷ್ಟಿ, ಅಗತ್ಯ ಅನುದಾನಗಳ ವ್ಯವಸ್ಥೆ ಹಾಗೂ ನಾಗರಿಕರನ್ನು ಜತೆಯಾಗಿ ಕರೆದುಕೊಂಡು ಹೋಗುವ ಅವರ ಸಾಮರ್ಥ್ಯದ ಫಲವಾಗಿ, ಇಂದು ಇಲ್ಲಿ ವಿಶ್ವಮಟ್ಟದ, ಪ್ರಶಸ್ತಿ ವಿಜೇತ ವಿಕೇಂದ್ರಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ ಸ್ಥಾಪನೆಯಾಗಿದೆ.

ಈ ಕೇಂದ್ರದಲ್ಲಿ ಐದು ವಿಧದ ತ್ಯಾಜ್ಯ ಹರಿವುಗಳನ್ನು ಸಂಸ್ಕರಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಯ ಕುರಿತು ಜ್ಞಾನ ನೀಡುವ “ಕಲಿಕೆಯ ಕೇಂದ್ರ”ವೂ ಸ್ಥಾಪನೆಯ ಹಂತದಲ್ಲಿದೆ. ಪ್ರತಿದಿನ ಸುಮಾರು 15 ಟನ್‌ಗಳಷ್ಟು ಸಸ್ಯ ಹಸಿ ತ್ಯಾಜ್ಯವನ್ನು ಅನೈರಾಬಿಕ್ ವಿಧಾನದಲ್ಲಿ ಸಂಸ್ಕರಿಸಿ ಬಯೋ–ಸಿಎನ್‌ಜಿಯಾಗಿ ಪರಿವರ್ತಿಸಲಾಗುತ್ತಿದ್ದು, ಈ ಇಂಧನವನ್ನು ಪೈಪ್ ಮೂಲಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಪೂರೈಸಲಾಗುತ್ತಿದೆ.

ಇಲ್ಲಿ ದೊಡ್ಡ ಮಟ್ಟದ ಒಣ ತ್ಯಾಜ್ಯ ಸಂಗ್ರಹ ಮತ್ತು ವರ್ಗೀಕರಣ ಕೇಂದ್ರ (DWCC) ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸುಮಾರು 1 ಟನ್ ಒಣ ತ್ಯಾಜ್ಯವನ್ನು ಸ್ವೀಕರಿಸಿ ವಿಂಗಡನೆ ಹಾಗೂ ಮರುಬಳಕೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ನವೀಕರಿಸಲಾದ ವಿಶಾಲ ಥರ್ಮೋಕೋಲ್ ಮತ್ತು ಮೆಟ್ರೆಸ್‌ಗಳ ಸಂಗ್ರಹ ಹಾಗೂ ಪ್ರಾಥಮಿಕ ಸಂಸ್ಕರಣಾ ಕೇಂದ್ರವು ದಿನಕ್ಕೆ 1 ಟನ್‌ಗಿಂತ ಹೆಚ್ಚು ತ್ಯಾಜ್ಯವನ್ನು ನಿರ್ವಹಿಸುತ್ತಿದ್ದು, ಇದು ತನ್ನದೇ ಆದ ವಿಶಿಷ್ಟತೆಯ ಕೇಂದ್ರವಾಗಿದೆ.

ಇದಲ್ಲದೆ, ವೈಜ್ಞಾನಿಕ ಹಾಗೂ ಸ್ವಚ್ಛ ವಿಧಾನದಲ್ಲಿ ಪ್ರತ್ಯೇಕಗೊಂಡ ಹಸಿ ತ್ಯಾಜ್ಯವನ್ನು ಸ್ಥಳಾಂತರಿಸುವ ಟ್ರಾನ್ಸ್‌ ಫಾರ್ಮರ್ ಸ್ಟೇಷನ್ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು 5 ಟನ್ ತ್ಯಾಜ್ಯವನ್ನು ನಿರ್ವಹಿಸುತ್ತದೆ. ಇನ್ನೊಂದು ಒಣ ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಶೀಘ್ರದಲ್ಲೇ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ರಾಜ್ಯಮಟ್ಟದ ಮಾದರಿ ಕೇಂದ್ರವಾಗಿ ಕಾರ್ಯಾರಂಭ ಮಾಡಲಿದೆ.

ತ್ಯಾಜ್ಯ ನಿರ್ವಹಣೆಯ ಕುರಿತು ನಗರದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡುವ “ಕಲಿಕೆಯ ಕೇಂದ್ರ”ವೂ ಇಲ್ಲಿ ಸ್ಥಾಪನೆಯಾಗುತ್ತಿದೆ. ಒಟ್ಟಾರೆ, ಇದು ಬೆಂಗಳೂರಿಗೂ ಮಾತ್ರವಲ್ಲದೆ ದೇಶದಾದ್ಯಂತ ವಿಸ್ತರಿಸಿ ಅನುಕರಿಸಬಹುದಾದ, ತನ್ನದೇ ಆದ ವಿಶಿಷ್ಟತೆ ಹೊಂದಿದ ಮಾದರಿ ವಿಕೇಂದ್ರಿತ ತ್ಯಾಜ್ಯ ನಿರ್ವಹಣಾ ಕೇಂದ್ರ ಇದಾಗಿದೆ.

ಬೆಂಗಳೂರು ನಗರದ ಶಾಸಕರು ಗಳು, Solid Waste Management NGOs ಗಳು,‌ ಪರಿಸರವಾದಿಗಳು  ಈಗಾಗಲೇ ಇಲ್ಲಿಗೆ ಭೇಟಿ ಕೊಟ್ಟು, ಸದರಿ‌ ಉಪಕ್ರಮವನ್ನು‌ ಪ್ರಶಂಸಿಸಿ, ಇದೇ ಮಾದರಿಯನ್ನು ಅಳವಡಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುತ್ತಿದ್ದಾರೆ.


Share It

You cannot copy content of this page