ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ರೇಷನ್ ಕಾರ್ಡ್ದಾರರಿಗೆ ಮೂರು ಸಾವಿರ ರು. ನಗದು ಉಡುಗೊರೆ ನೀಡಲು ಸರಕಾರ ತೀರ್ಮಾನಿಸಿದೆ. ಇದರ ಲಾಭವನ್ನು ತಮಿಳುನಾಡಿನ 2.22 ಕೋಟಿ ಪಡಿತರ ಚೀಟಿದಾರರಿಗೆ ಪಡೆದುಕೊಳ್ಳಲಿದ್ದಾರೆ.
ತಮಿಳುನಾಡು ಸರಕಾರ ಪೊಂಗಲ್ ಸಮಯದಲ್ಲಿ ಪಡಿತರ ಚೀಟಿದಾರರಿಗೆ ಉಡುಗೊರೆ ನೀಡುತ್ತದೆ. ಇದರಲ್ಲಿ ಸೀರೆ, ಧೋತಿ ಮತ್ತು ಕಬ್ಬಿನಂತಹ ವಸ್ತುಗಳೂ ಸೇರಿ ನಗದು ಇರುತ್ತದೆ. ಇದೀಗ ತಮಿಳುನಾಡು ಸರ್ಕಾರ ಪೊಂಗಲ್ ಉಡುಗೊರೆ ಪ್ಯಾಕೇಜ್ ಜತೆಗೆ 3,000 ರೂ. ನಗದು ಉಡುಗೊರೆ ಘೋಷಿಸಿದೆ.
ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಜ್ಯದ ಜನ ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು, ಸರ್ಕಾರ ಎಲ್ಲ ಅಕ್ಕಿ ಪಡಿತರ ಚೀಟಿದಾರರು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವ ಕುಟುಂಬಗಳಿಗೆ ಉಡುಗೊರೆ ಪ್ಯಾಕೇಜ್ ಒದಗಿಸುತ್ತದೆ ಎಂದಿದೆ.
ಪ್ಯಾಕೇಜ್‌ನಲ್ಲಿ ಒಂದು ಕಿಲೋಗ್ರಾಂ ಅಕ್ಕಿ, ಒಂದು ಕಿಲೋಗ್ರಾಂ ಸಕ್ಕರೆ ಮತ್ತು ಪೂರ್ಣ ಕಬ್ಬು ಸೇರಿದೆ. ಇದರ ಮೂಲಕ, 2.22 ಕೋಟಿ ಅಕ್ಕಿ ಪಡಿತರ ಚೀಟಿದಾರರು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಪೊಂಗಲ್ ಉಡುಗೊರೆ ಪ್ಯಾಕೇಜ್ ಮತ್ತು ನಗದು ಉಡುಗೊರೆಗಾಗಿ ಸರ್ಕಾರ ಒಟ್ಟು 6, 936 ಕೋಟಿ ರೂ.ಗಳನ್ನು ನಿಗದಿಪಡಿಸಿದೆ ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.
ಪ್ಯಾಕೇಜ್ ಅನ್ನು ಪೊಂಗಲ್ ಹಬ್ಬದ ಮೊದಲು ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬೇಕೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶಿಸಿದ್ದಾರೆ. ಜನವರಿ 8 ರಿಂದ ಪಡಿತರ ಅಂಗಡಿಗಳಲ್ಲಿ ಇದಕ್ಕಾಗಿ ಟೋಕನ್‌ಗಳನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ.

