ಸುದ್ದಿ

ಮಡದಿಯನ್ನು ವೇಲ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದ ಪಾಪಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

Share It

ಬೆಂಗಳೂರು: ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಟ್ಟು, ಅದರಲ್ಲಿ ಸಾಯಲಿಲ್ಲ ಎಂದು ವೇಲ್ ನಿಂದ ಕುತ್ತಿಗೆ ಬಿಗಿದು ಮಡದಿಯನ್ನು ಕೊಲೆ ಮಾಡಿದ ಪಾಪಿ ಪತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ನಗರದ ಮ್ಯಾಜಿಸ್ಟ್ರೇಟ್ ನೀಡಿದ ಈ ಶಿಲ್ಷೆಗೆ ಗುರಿಯಾದ ಅಪರಾಧಿ ವಿನಯ್ ಕುಮಾರ್. ತನ್ನ ಪತ್ನಿಯನ್ನು ಕೊಂದ ಆರೋಪದಲ್ಲಿ 2021ರಲ್ಲಿ ಮಹದೇವಪುರ ಪೊಲೀಸರು ಬಂಧಿಸಿದ್ದರು. ಈತನ ಮೇಲಿನ ಆರೋಪಗಳು ಸಾಭೀತಾದ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಚಾಮರಾಜನಗರ ಮೂಲದ ವಿನಯ್‌ಕುಮಾರ್, ಹಾಸನ ಮೂಲದ ಯುವತಿ ಯನ್ನು ಪ್ರೀತಿಸಿ 2018 ರಲ್ಲಿ ಮದುವೆ ಮಾಡಿಕೊಂಡಿದ್ದ. ಇಬ್ಬರು ನಾರಾಯಣಪುರದಲ್ಲಿ ವಾಸವಿದ್ದರು. 2021 ರವರೆಗೆ ಅವರಿಗೆ ಮಕ್ಕಳಾಗಿರಲಿಲ್ಲ. ಈ ನಡುವೆ ವಿನಯ್ ಕುಮಾರ್ , ತನ್ನ ಸಹೋದ್ಯೋಗಿಯನ್ನು ಪ್ರೀತಿಸಿ, ಮದುವೆಗೆ ಒತ್ತಾಯಿಸಿದ್ದ. ಆದರೆ, ಆಕೆ ಈತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಕಾರಣಕ್ಕೆ ನಿರಾಕರಿಸಿದ್ದಳು.

ಹೆಂಡತಿಯಿದ್ದರೆ ಆಕೆ ಮದುವೆಯಾಗುವುದಿಲ್ಲ ಎಂದು ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿ, 2021 ರ ಏಪ್ರಿಲ್ 6 ರಂದು ಬಿಯರ್ ತಂದು, ಅದರಲ್ಲಿ 10 ನಿದ್ರೆ ಮಾತ್ರೆ ಹಾಕಿ ಹೆಂಡತಿಗೆ ಕುಡಿಸಿದ್ದ. ಬೆಳಗ್ಗೆ ಎದ್ದು ನೋಡಿದಾಗ ಮಡದಿ ಉಸಿರಾಡುತ್ತಿರುವುದು ಕಂಡುಬಂತು. ಆಕೆ ಸತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ದುಪ್ಪಟ್ಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ ಎನ್ನಲಾಗಿದೆ.


Share It

You cannot copy content of this page