ಅಪರಾಧ ಸುದ್ದಿ

ದೆಹಲಿ ಮೆಟ್ರೋ ಸ್ಟಾಫ್ ಕ್ವಾಟ್ರಸ್‌ನಲ್ಲಿ ಬೆಂಕಿ: ದಂಪತಿ ಮತ್ತು 10 ವರ್ಷದ ಮಗಳು ಸಾವು

Share It

ನವದೆಹಲಿ: ದೆಹಲಿ ಮೆಟ್ರೋ ನಿಗಮದ (ಡಿಎಂಆರ್‌ಸಿ)ಸಿಬ್ಬಂದಿ ವಸತಿಗೃಹದ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ದಂಪತಿ ಮತ್ತು 10 ವರ್ಷದ ಮಗಳು ಸಾವನ್ನಪ್ಪಿರುವ ಘಟನೆ ವಾಯುವ್ಯ ದೆಹಲಿಯ ಆದರ್ಶನಗರದಲ್ಲಿ ನಡೆದಿದೆ.

ಮಂಗಳವಾರ ಮುಂಜಾನೆ ಜನರು ಗಾಢ ನಿದ್ದೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಡಿಎಂಆರ್‌ಸಿ ಕ್ವಾರ್ಟರ್ಸ್ನ ಕಟ್ಟಡದ ೫ನೇ ಮಹಡಿಯಲ್ಲಿ ಬೆಳಗಿನ ಜಾವ ೨.೩೯ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಅಜಯ್ ಕುಮಾರ್ (42), ಪತ್ನಿ ನೀಲಂ (38) ಮತ್ತು ಮಗಳು ಜಾನ್ವಿ ಬೆಂಕಿಯಿAದ ಮೃತಪಟ್ಟರು ಎನ್ನಲಾಗಿದೆ.

ಈ ವೇಳೆ ರಾಕೇಶ್ ಎಂಬ ಸಿಬ್ಬಂದಿ ಗಾಯಗೊಂಡಿದ್ದು, ಜಗಜೀವನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತ ಅಜಯ್ ಅವರು ದೆಹಲಿ ಮೆಟ್ರೋದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿವೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


Share It

You cannot copy content of this page